More

    ಆರು ತಿಂಗಳಲ್ಲಿ ಸಮಸ್ಯೆಗೆ ಸ್ಪಂದಿಸದಿದ್ದರೆ ಅಮಾನತು

    ಕಮಲಾಪುರ (ಕಲಬುರಗಿ): ಸಾರ್ವಜನಿಕರ ಸಮಸ್ಯೆ ಕುರಿತಾದ ಅರ್ಜಿಗಳು ಆರು ತಿಂಗಳ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸದಿದ್ದರೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಯಾವುದೇ ಶಿಫಾರಸ್ಸುಗಳಿಗೆ ಕಿವಿಗೊಡದೆ ನಿಯಮಾವಳಿಯಂತೆ ಕಾರ್ಯ ನಿರ್ವವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಾಕೀತು ಮಾಡಿದರು.

    ತಹಸಿಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಮಂಗಳವಾರ ಹಮ್ಮಿಕೊಂಡ ಸಾರ್ವಜನಿಕರ ಅಹವಾಲು ಆಲಿಕೆ ನಂತರ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿ ಸ್ಪಂದಿಸದ ಕಾರಣ ಡಿಸಿ ಕಚೇರಿಗೆ ಬರುತ್ತಾರೆ. ಮುಂಬರುವ ದಿನಗಳಲ್ಲಿ ಬೇಜವಾಬ್ದಾರಿ ತೋರಿದರೆ ಖಚಿತವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಪಿಡಿಒಗಳ ಕುರಿತು ಹೆಚ್ಚಿನ ಸಂಖ್ಯೆಯ ದೂರುಗಳು ಬರುತ್ತಿವೆ. ತಾಪಂ ಇಒ ಈ ಕುರಿತು ಎಚ್ಚರಿಕೆ ವಹಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆಯಾ ಹೋಬಳಿಗೆ ಸಂಬಂಧಿಸಿದ ವಿವಾದಗಳ ಕುರಿತು ಗ್ರಾಮ ಲೆಕ್ಕಿಗರಿಗೆ ತಿಳುವಳಿಕೆ ಇರಲಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

    ವಿಧವಾ ವೇತನ ಕೋರಿ ಬಂದಿದ್ದ ವಿಧವೆಗೆ ಸ್ಥಳದಲ್ಲೇ ಮಾಶಾಸನದ ಆದೇಶ ಪತ್ರ ನೀಡಲಾಯಿತು.

    ತಹಸೀಲ್ದಾರ್ ಸುರೇಶ ವರ್ಮಾ, ಗ್ರೇಡ್-2 ತಹಸೀಲ್ದಾರ್ ಗಂಗಾಧರ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಟಿಎಚ್ಒ ಮಾರುತಿ ಕಾಂಬ್ಳೆ, ಪ್ರಭಾರಿ ಇಒ ಜಗನ್ನಾಥ ರೆಡ್ಡಿ, ನಿಸಾರ್ ಅಹ್ಮದ್, ರಘುನಂದನ ದ್ಯಾಮಿಣಿ, ಮಂಜುನಾಥ ಬಿರಾದಾರ, ಸಂತೋಷ ಸೋಲಾಪುರೆ, ಅಂದಪ್ಪ ಓಕಳಿ, ಸವಿತಾ, ಅವಿನಾಶ, ಪದ್ಮಾವತಿ, ಪ್ರಭಾವತಿ ಇತರರಿದ್ದರು.

    ಎರಡು ದಿನಗಳಲ್ಲಿ ಹಕ್ಕುಪತ್ರ ವಿತರಣೆ: ತಾಲೂಕಿನ ಬೆಣ್ಣೆತೋರಾ ಹಿನ್ನೀರಿನ ಪ್ರದೇಶಕ್ಕೆ ಒಳಪಟ್ಟು ಮುಳುಗಡೆಯಾಗಿರುವ ಕುರಿಕೋಟಾ ಕೇಂದ್ರ 180 ಫಲಾನುಭವಿಗಳಿಗೆ ಈ ಹಿಂದೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಉಳಿದವರಿಗೆ ಎರಡು ದಿನಗಳಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

    ತಕ್ಷಣ ಆದೇಶ ನೀಡಿ: ಗ್ರಾಮೀಣ ಭಾಗದಿಂದ ಜಮೀನುಗಳಿಗೆ ಹೋಗುವ ರಸ್ತೆ ಕುರಿತಾದ ದೂರುಗಳು ಸಾಕಷ್ಟು ಬರುತ್ತಿವೆ. ನಕಾಶೆಯಲ್ಲಿ ರಸ್ತೆಯಿದ್ದರೆ ತಕ್ಷಣ ರಸ್ತೆ ಒದಗಿಸುವ ಕುರಿತು ಆದೇಶ ನೀಡುವಂತೆ ತಹಸೀಲ್ದಾರ್ ಸುರೇಶ ವಮರ್ಾ ಅವರಿಗೆ ಸೂಚನೆ ನೀಡಿದರು.

    ಕಳೆದ ಶನಿವಾರ ಕಲಬುರಗಿಗೆ ನೀತಿ ಆಯೋಗ ಆಗಮಿಸಿದ್ದರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅರ್ಧದಲ್ಲೇ ಬಿಟ್ಟು ಹೋಗಬೇಕಾಯಿತು. ಕಲಬುರಗಿ ಅಭಿವೃದ್ಧಿಗಾಗಿ 300 ಕೋಟಿ ರೂ.ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು.
    | ಯಶವಂತ ಗುರುಕರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts