More

    ಆಯುರ್ವೇದದಲ್ಲಿ ಅಡ್ಡ ಪರಿಣಾಮ ಇಲ್ಲ

    ಚಿತ್ರದುರ್ಗ: ಗ್ರಾಮೀಣ ಭಾಗಗಳಲ್ಲಿ ಪಾರಂಪರಿಕ ವೈದ್ಯರು ಸದ್ದುಗದ್ದಲವಿಲ್ಲದೆ, ಸೇವೆ ಸಲ್ಲಿಸುತ್ತಿದ್ದಾರೆ. ಆಯುರ್ವೇದ ಪದ್ಧತಿಯಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

    ತಾಲೂಕು ಭಗೀರಥ ಉಪ್ಪಾರ ಸಂಘದಿಂದ ಮೆದೇಹಳ್ಳಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ, ಪಾರಂಪರಿಕ ವೈದ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ವಿಷಪೂರಿತ, ಕಲಬೆರಕೆ ಆಹಾರ ಸೇವನೆಯಿಂದಾಗಿ ಕಿರಿಯರಿಂದ ಹಿರಿಯರವರೆಗೂ ವಿವಿಧ ರೀತಿಯ ರೋಗಗಳು ಕಾಡುತ್ತಿವೆ. ಇದು ಅತ್ಯಂತ ನೋವಿನ ಸಂಗತಿ. ವಿದೇಶಿಗರು ಆಯುರ್ವೇದ, ಯೋಗದ ಮಹತ್ವ ಅರಿತು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅದು ನಮ್ಮಲ್ಲೂ ಪರಿಣಾಮಕಾರಿಯಾಗಿ ಆದರೆ, ಆರೋಗ್ಯ ರಕ್ಷಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

    ಮಾನಸಿಕ, ದೈಹಿಕವಾಗಿ ಎಲ್ಲರೂ ಆರೋಗ್ಯದಿಂದ ಇರಲು ಕ್ರಮಬದ್ಧ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಅದೇ ಔಷಧವಾಗಬೇಕು. ಆಗ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ಬೆಳೆಗಳ ಉತ್ಪಾದನೆಗೆ ರಾಸಾಯನಿಕ ಬದಲು ಸಾವಯವಕ್ಕೆ ಒತ್ತು ನೀಡಿದರೆ, ಭೂಮಿಯ ಫಲವತ್ತತೆ ಹೆಚ್ಚಾಗಿ ಉತ್ತಮ ಆಹಾರ ಪದಾರ್ಥಗಳು ಜನರ ಕೈಸೇರಲಿವೆ ಎಂದು ಹೇಳಿದರು.

    ಸಂಘದ ಅಧ್ಯಕ್ಷ ಸಿದ್ದಪ್ಪ, ಗೌರವಾಧ್ಯಕ್ಷ ಗುರುಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಅಜ್ಜಣ್ಣ, ಸದಸ್ಯ ದುಗ್ಗಪ್ಪ, ಪಾರಂಪರಿಕ ವೈದ್ಯರಾದ ಸುವರ್ಣಮ್ಮ, ಮಂಜುನಾಥ್ ಆರಾಧ್ಯ, ದಿನೇಶ್, ಶ್ರೀನಿವಾಸ್, ಶಿಕ್ಷಕ ಮುರಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts