More

    ಆಯಾಗಳ ಸಂಘದಿಂದ ಜಿಪಂ ಎದುರು ಪ್ರತಿಭಟನೆ

    ಬೆಳಗಾವಿ: ಬೇಸಿಗೆ ರಜೆ ಬಾಕಿ ವೇತನ, ಬಾಕಿ ಮಾಸಿಕ ವೇತನ ಪಾವತಿ ಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದಿಂದ ನಗರದ ಜಿಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಲಾಯಿತು.

    ಕೈಯಲ್ಲಿ ಫಲಕ ಹಿಡಿದು ಜಿಪಂ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. 2002ರಿಂದ 2012ವರೆಗಿನ ಚಿಕ್ಕೋಡಿ ವಿಭಾಗದ ಆಯಾಗಳ ಬಾಕಿ ವೇತನ ಹಾಗೂ ಅಕ್ಟೋಬರ್ 2018ರಿಂದ ಮಾರ್ಚ್ 2019ರ ವರೆಗೆ ನೀಡದೆ ತಡೆಹಿಡಿದ ಮಾಸಿಕ ವೇತನ ನೀಡಬೇಕು. ಈ ಮಾಸಿಕ ವೇತನ ಪಾವತಿಗೆ ಬೇಕಾದ 98.54 ಲಕ್ಷ ರೂ. ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಪ್ರಸಕ್ತ ಸಾಲಿನ 1 ಮತ್ತು 2ನೇ ಕಂತಿನಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದ ಅನುದಾನ ಯಾರಿಗೆ ಕೊಟ್ಟಿದ್ದಾರೆ? ಯಾರಿಗೆ ಕೊಟ್ಟಿಲ್ಲ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಡೆ ಹಿಡಿದಿರುವ 3 ತಿಂಗಳ ಬಾಕಿ ವೇತನ ಕೂಡಲೇ ಮಂಜೂರು ಮಾಡಬೇಕು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರ, ಬೈಲಹೊಂಗಲ, ಖಾನಾಪುರ ತಾಲೂಕಿನ ಆಯಾಗಳಿಗೆ 2002-12ರ ವರೆಗೆ ತಡೆಹಿಡಿದ ಬೇಸಿಗೆ ರಜೆ ಬಾಕಿ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಸಂಘದ ರಾಜ್ಯ ಕಾರ್ಯದರ್ಶಿ ಜಯಶ್ರೀ ಊಟಿ, ಉಪಾ ಧ್ಯಕ್ಷೆ ಕಮಲಮ್ಮ ನಾಪುರ ಹಾಗೂ ಶಾರದಾಬಾಯಿ ಧಾರವಾಡ, ಶಾಂತಾ ಬೆಳಗಾವಿ, ಎಂ.ಎಸ್. ಮಾಲಬಾದೆ, ರುಕ್ಮವ್ವ ಕೊಣ್ಣೂರ, ಬಾಯಕ್ಕ ಬಾಳಿಗೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts