More

    ಆಮ್ಲಜನಕ ಕೊರತೆಯಿಂದ ಮೀನುಗಳ ಸಾವು

    ಗಜೇಂದ್ರಗಡ: ತಾಲೂಕಿನ ಜಿಗೇರಿ ಕೆರೆಯಲ್ಲಿ ಮೀನುಗಳ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಜೆ. ದೀಪಶ್ರೀ ಸ್ಪಷ್ಟಪಡಿಸಿದ್ದಾರೆ.

    ಎರಡು ಮೂರು ದಿನಗಳಿಂದ ಕೆರೆಯಲ್ಲಿನ ಸಾವಿರಾರು ಮೀನುಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಕುರಿತು ‘ವಿಜಯವಾಣಿ’ ಏ.29 ರಂದು ‘ಸಾವಿನ ಸುತ್ತ ಅನುಮಾನದ ಹುತ್ತ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿ ಬುಧವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜತೆಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.

    ನಂತರ ಮಾತನಾಡಿದ ಅವರು, ‘ಕೆರೆಯನ್ನು ಸುದೀರ್ಘವಾಗಿ ಪರಿಶೀಲನೆ ನಡೆಸಿದ್ದೇನೆ. ಕೆರೆಯಲ್ಲಿ ಯಾವುದೇ ವಿಷ ಹಾಕಿಲ್ಲ. ಒಂದು ವೇಳೆ ವಿಷ ಹಾಕಿದ್ದರೆ ಎಲ್ಲ ಮೀನುಗಳು ಸಾವನ್ನಪ್ಪುತ್ತಿದ್ದವು. ಬಿಸಿಲಿನ ತಾಪದಿಂದ ಕೆರೆಯಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ಇದರಿಂದ ಮೀನುಗಳು ಸಾವನ್ನಪ್ಪುತ್ತಿವೆ. ಕೆರೆಯಲ್ಲಿ ಔಷಧ ಸಿಂಪಡಿಸಲು ಮತ್ತು ಸತ್ತ ಮೀನುಗಳನ್ನು ಹೂಳಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆರೆಯಲ್ಲಿನ ಮೀನುಗಳ ಶಿಕಾರಿಯನ್ನು ಗುತ್ತಿಗೆದಾರರು ಮಾಡಬಹುದು ಹಾಗೂ ಅದನ್ನು ಆಹಾರವಾಗಿ ಬಳಸಬಹುದು. ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts