More

    ಆಣೆ ವಾಡಿಸಿ ಸಾಲ ನೀಡುವ ದುಸ್ಥಿತಿ ಬಂದಿಲ್ಲ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸ್ಪಷ್ಟನೆ, ಬಡವರ ಕಣ್ಣೀರೊರೆಸುವ ಸಂಕಲ್ಪ

    ಕೋಲಾರ: ಪಕ್ಷ, ಜಾತಿ, ಮತ, ಅಂತಸ್ತು ನೋಡಿ ಸಾಲ ನೀಡುವ ಮನೋಭಾವ ಡಿಸಿಸಿ ಬ್ಯಾಂಕ್‌ನಲ್ಲಿಲ್ಲ. ಕಷ್ಟ, ನಷ್ಟದಿಂದ ನೊಂದು, ಬೆಂದು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹೆಣ್ಣು ಮಕ್ಕಳು, ರೈತರು ಮತ್ತು ಬಡವರನ್ನು ಮೀಟರ್ ಬಡ್ಡಿ, ಚಕ್ರಬಡ್ಡಿಗಳ ಸುಳಿಯಿಂದ ಪಾರುವಾಡುವ ಪ್ರಾವಾಣಿಕ ಸಂಕಲ್ಪದೊಂದಿಗೆ ಆಡಳಿತ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

    ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಶುಕ್ರವಾರ ನಗರದ ವಿವಿಧ ಸೀಶಕ್ತಿ ಸಂಗಳಿಗೆ ಬಡ್ಡಿರಹಿತ ಸಾಲ ವಿತರಿಸಿ ವಾತನಾಡಿ, ಡಿಸಿಸಿ ಬ್ಯಾಂಕ್ ಸಾಲ ನೀಡುವಾಗ ನೀವು ಯಾವ ಜಾತಿ, ಪಕ್ಷ ಎಂದು ಕೇಳಿದ ನಿದರ್ಶನವಿದ್ದರೆ ಗಮನಕ್ಕೆ ತನ್ನಿ ಎಂದು ಮಹಿಳೆಯರಿಗೆ ಮನವಿ ವಾಡಿದರು. ಎರಡೂ ಜಿಲ್ಲೆಗಳಲ್ಲಿ ಯಾವುದೇ ಮಹಿಳೆ ಸಾಲಕ್ಕೆ ಅರ್ಜಿ ಹಾಕಿ, ಅರ್ಹತೆ ಇದ್ದರೂ ಸಾಲ ಪಡೆಯಲು ಸಾಧ್ಯವಾಗದಿದ್ದರೆ ನನ್ನ ಗಮನಕ್ಕೆ ತರಬೇಕು. ಹಾಗಾದರೆ ಕೂಡಲೇ ಸಾಲ ಒದಗಿಸಲಾಗುವುದು. ಬ್ಯಾಂಕಿನಲ್ಲಿ ಲಾಟರಿ ಹಾಕಿ ಸಾಲ ನೀಡುವ ಪದ್ಧತಿ ಇಲ್ಲ. ದಿವಾಳಿಯಾಗಿದ್ದ ಬ್ಯಾಂಕ್ ಅನ್ನು ಸುಸ್ಥಿತಿಗೆ ತರಲಾಗಿದೆಯೇ ಹೊರತು, ಇಲ್ಲಿ ಅಕ್ರಮಗಳನ್ನು ನಡೆಸುತ್ತಾ, ಮತ್ತೆ ದಿವಾಳಿ ಅಂಚಿಗೆ ಕೊಂಡೊಯ್ಯುವ ಮನಸ್ಥಿತಿ ಆಡಳಿತಕ್ಕಿಲ್ಲ. ಇನ್ನು ಬ್ಯಾಂಕ್‌ಗೆ ಆಣೆ, ಪ್ರವಾಣ ವಾಡಿಸಿಕೊಂಡು ಸಾಲ ನೀಡುವ ದುಸ್ಥಿತಿ ಬಂದಿಲ್ಲ ಎಂದು ಸ್ವಷ್ಟಪಡಿಸಿದರು.

    ಅವಿಭಜಿತ ಜಿಲ್ಲೆಯ ತಾಯಂದಿರು ಡಿಸಿಸಿ ಬ್ಯಾಂಕ್ ಅನ್ನು ತಮ್ಮ ತವರು ಮನೆ ಎಂದು ಭಾವಿಸಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅವರ ಖಾತೆಗಳಿಗೆ ಸಾಲದ ಹಣ ತಲುಪಿಸುವ ವ್ಯವಸ್ಥೆ ವಾಡಿದ್ದೇವೆ. ಸೊಸೈಟಿಗಳಲ್ಲಿ ಭ್ರಷ್ಟಾಚಾರ ಇಣುಕಿ ನೋಡಲು ಅವಕಾಶವಿಲ್ಲದಂತೆ ದೇಶದಲ್ಲೇ ಮೊದಲ ಬಾರಿಗೆ ್ಯಾಕ್ಸ್‌ಗಳ ಗಣಕೀಕರಣ ಮುಗಿಸಿದ್ದೇವೆ ಎಂದು ತಿಳಿಸಿದರು.

    ಕೇಂದ್ರ, ರಾಜ್ಯ ಸರ್ಕಾರದ ನಿಯಮದಡಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ. ಸಹಕಾರ ತತ್ವಗಳಿಗೆ ವಿರುದ್ಧ ಆಡಳಿತ ಮಂಡಳಿ ನಡೆದುಕೊಂಡಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಸಾಲ ಒದಗಿಸಿದ್ದೇವೆ. ಸ್ವ-ಸಹಾಯ ಸಂಗಳಲ್ಲಿ ಪಾರದರ್ಶಕತೆ ತರಲು ಇ-ಶಕ್ತಿ ಅನುಷ್ಠಾನವನ್ನು ದೇಶದಲ್ಲೇ ಮೊದಲು ವಾಡಿದ ಹೆಗ್ಗಳಿಕೆ ಬ್ಯಾಂಕಿನದ್ದು. ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಪರಿಶ್ರಮದಿಂದ ಬ್ಯಾಂಕಿನ ಎನ್‌ಪಿಎ ಕಡಿಮೆಯಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಲಾಭದತ್ತ ತಂದು ಸಹಕಾರ ರಂಗವನ್ನು ನಂಬಿದ ಜಿಲ್ಲೆಯ ರೈತರು, ಮಹಿಳೆಯರ ಹಿತ ರಕ್ಷಣೆ ವಾಡಿದ ಆತ್ಮತೃಪ್ತಿ ನಮಗಿದೆ. ಯಾರೇ ಟೀಕೆ ವಾಡಿದರೂ ಅದಕ್ಕೆ ಪ್ರತ್ಯುತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. ನಮ್ಮ ಕೆಲಸವನ್ನು ನಾವು ಪ್ರಾವಾಣಿಕತೆಯಿಂದ ವಾಡುತ್ತೇವೆ ಎಂದು ಗೋವಿಂದಗೌಡರು ಹೇಳಿದರು.

    ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ವಾತನಾಡಿ, ಮಹಿಳೆಯರು ಸಾಲ ಪಡೆಯುವುದರ ಜತೆಗೆ ಅವರ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಇಡಬೇಕು. ಇದರಿಂದ ಮತ್ತಷ್ಟು ಮಹಿಳೆಯರು, ರೈತರಿಗೆ ಸಾಲ ಸೌಲಭ್ಯ ವಿಸ್ತರಿಸಲು ಸಹಕಾರಿಯಾಗಲಿದೆ. ಗೋವಿಂದಗೌಡ ಅವರು ಬ್ಯಾಂಕ್ ಅನ್ನು ಉಳಿಸಿ ಬೆಳೆಸುವ ಕೆಲಸ ವಾಡಿದ್ದಾರೆ. ಅವರ ಬೆನ್ನಿಗೆ ಆಡಳಿತ ಮಂಡಳಿ ಇದೆ. ಇದೀಗ ಬ್ಯಾಂಕ್ ಅಭಿವೃದ್ಧಿಯಿಂದಾಗಿ ಮತ್ತೆ 13 ಹೊಸ ಶಾಖೆಗಳನ್ನು ಸ್ಥಾಪಿಸಲು ಅನುಮತಿ ಪಡೆದುಕೊಳ್ಳಲಾಗಿದೆ ಎಂದರು.

    ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಷ್, ಅಮೀನಾ ಮತ್ತಿತರರಿದ್ದರು.

    ತಾಯಂದಿರನ್ನು ಎಂದೂ ಬ್ಯಾಂಕ್ ಸಿಬ್ಬಂದಿ, ಆಡಳಿತ ಮಂಡಳಿಯವರು ಜಾತಿ, ಪಕ್ಷ, ಮತ ಯಾವುದೆಂದು ಕೇಳಿರುವ ನಿದರ್ಶನವಿಲ್ಲ. ಪ್ರತಿ ಕುಟುಂಬಕ್ಕೂ ಸಹಕಾರ ಸಂದ ಸದಸ್ಯತ್ವ ನೀಡಿ, ಸ್ವಾವಲಂಬಿ ಬದುಕಿಗೆ ನೆರವಾಗುವ ಗುರಿ ಬ್ಯಾಂಕ್ ಆಡಳಿತ ಮಂಡಳಿಯದ್ದಾಗಿದೆ. ದಿವಾಳಿಯಾಗಿದ್ದಾಗ ಬ್ಯಾಂಕ್ ಉಳಿಸುವ ವಾತನ್ನು ಯಾರೂ ಆಡಿದ ನಿದರ್ಶನವಿಲ್ಲ. ಆಗ 44 ಕೋಟಿ ರೂ. ಇದ್ದ ಠೇವಣಿ ಈಗ 400 ಕೋಟಿ ರೂ.ಗೆ, 1300 ಕೋಟಿ ರೂ.ಗೆ ಸಾಲ ವಿತರಣೆ ಏರಿಕೆಯಾಗಿದ್ದು, ನಿಯವಾನುಸಾರ ಮಹಿಳೆಯರು ಸಂ ರಚಿಸಿಕೊಂಡು ಉಳಿತಾಯದ ಹಣ ಇಟ್ಟು, ಸಾಲಕ್ಕೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಲಾಗಿದೆ.
    ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts