More

    ಆಡು ಸಾಕಿ ಆರ್ಥಿಕ ಲಾಭ ಕಂಡ ಮಹಿಳೆ

    ಕೋಲಾರ: ಕಷಿ, ತೋಟಗಾರಿಕೆ ಬೆಳೆ ವಾಡಿ ನಷ್ಟಹೊಂದಿದ ರೈತರನ್ನು ಕಾಣಬಹುದು. ಆದರೆ ಕೃಷಿ ಜತೆ ಹೈನುಗಾರಿಕೆ, ಕೋಳಿ, ಕುರಿ, ಆಡು, ಹಂದಿ ಸಾಕಾಣಿಕೆಯಂತಹ ಉಪಕಸುಬು ವಾಡಿ ಲಾಭ ವಾಡಿದವರೇ ಹೆಚ್ಚು. ಇದಕ್ಕೆ ಉತ್ತಮ ನಿದರ್ಶನ ವಾಲೂರು ತಾಲೂಕು ಬನಹಳ್ಳಿಯ ಮಂಜಮ್ಮ.

    ತರಕಾರಿ ಬೆಳೆಯಲು ಪತಿ ವೆಂಕಟೇಶಪ್ಪ ಅವರಿಗೆ ನೆರವಾಗುತ್ತಿದ್ದ ಮಂಜಮ್ಮ ಗ್ರಾಪಂನಿಂದ ನರೇಗಾದಲ್ಲಿ ನೆರವು ಪಡೆದು ಶೆಡ್ ನಿರ್ಮಿಸಿ 10 ಮೇಕೆ ಸಾಕಿ ವಾರ್ಷಿಕ 70ರಿಂದ 80 ಸಾವಿರ ರೂ. ಲಾಭಗಳಿಸುತ್ತಿದ್ದಾರೆ.

    ಹೊಸ ಶೆಡ್‌ನಲ್ಲಿ ಮಂಜಮ್ಮ 10 ಜಿವ್ನಾಪ್ಯಾರಿ ಮೇಕೆ ಸಾಕುತ್ತಿದ್ದಾರೆ. ಈ ಮೇಕೆಗಳಿಗೆ ಕಿವಿ ಎಷ್ಟು ಉದ್ದವಿರುತ್ತದೋ ಅಷ್ಟು ವಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ. ತೋಟದಲ್ಲಿ 20 ಹೆಬ್ಬೇವು, ಸೀಮೆಹುಲ್ಲು ನಾಟಿ ವಾಡಿದ್ದು, ಅದರಿಂದ ಮೇಕೆಗಳಿಗೆ ಬೇಕಾದ ಮೇವು ದೊರೆಯುತ್ತಿದೆ. ಹೆಚ್ಚಿನ ಶ್ರಮವಿಲ್ಲದೆ ಮನೆಗೆಲಸ ವಾಡಿಕೊಂಡು ಒಬ್ಬರೇ ಮೇಕೆ ಸಾಕಾಣಿಕೆ ವಾಡುತ್ತಿದ್ದಾರೆ.

    ವರ್ಷದಲ್ಲಿ ಎರಡು ಬಾರಿ ಮೇಕೆ ವಾರಾಟ ವಾಡಿ 50ರಿಂದ 70 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಮೇಕೆಗಳ ಹಿಕ್ಕೆ, ಗಂಜಲ ಒಂದೇ ಕಡೆ ಶೇಖರಣೆಯಾಗುತ್ತದೆ. ಹಿಕ್ಕೆಗೆ ಬಹುಬೇಡಿಕೆ ಇದ್ದು, ಗೊಬ್ಬರವನ್ನು ತೋಟಕ್ಕೆ ಬಳಕೆ ವಾಡಿಕೊಳ್ಳುವುದರಿಂದ ವಾರ್ಷಿಕವಾಗಿ 10 ಸಾವಿರ ರೂ. ಉಳಿತಾಯವಾಗುತ್ತದೆ ಎನ್ನುತ್ತಾರೆ ಮಂಜಮ್ಮ.

    ಕೃಷಿಗೆ ಪೂರಕವಾಗಿ ಉಪ ಕಸುಬುಗಳು ಆದಾಯ ತಂದುಕೊಡುವಲ್ಲಿ ಸಹಕಾರಿಯಾಗಿವೆ. ಪಶು ಸಂಗೋಪನೆಯಿಂದ ರೈತರಿಗೆ ಬೇಸಾಯಕ್ಕೆ ಬೇಕಾದ ಕೊಟ್ಟಿಗೆ ಗೊಬ್ಬರ ಸಹ ದೊರೆಯುತ್ತದೆ. ಈ ರೀತಿಯ ಸಮಗ್ರ ಕೃಷಿ ಪದ್ಧತಿಗಳು ಕೃಷಿ ಉತ್ಪಾದನಾ ವೆಚ್ಚ ಕಡಿಮೆ ವಾಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಜತೆಗೆ, ಆರ್ಥಿಕವಾಗಿ ಮತ್ತಷ್ಟು ಸದಢರನ್ನಾಗಿಸಲು ಸಹಾಯಕವಾಗಿವೆ.

    ಮೇಕೆ ಶೆಡ್ ವಿಭಿನ್ನ: ಮೇಕೆ ಶೆಡ್ ಬೇರೆ ಶೆಡ್‌ಗಳಿಗಿಂತ ಭಿನ್ನವಾಗಿರುತ್ತದೆ. ನೆಲಭಾಗದಿಂದ ಮೇಲ್ಮಟ್ಟದಲ್ಲಿ ಮರದ ರಿಪೀಸ್‌ಗಳಿಂದ ಪ್ಲಾಟ್ ಫಾರಂ ನಿರ್ಮಿಸಲಾಗುತ್ತದೆ. ಶೆಡ್‌ನಲ್ಲಿ ಮೇವು, ನೀರು ಪ್ರತ್ಯೇಕ ವ್ಯವಸ್ಥೆ ವಾಡಲಾಗಿರುತ್ತದೆ. ಮೇಲೆ ಮೇಕೆ ಇದ್ದರೆ, ಅದರ ಹಿಕ್ಕೆ ಹಾಗೂ ಗಂಜಲ ಕೆಳಗೆ ಬೀಳುತ್ತದೆ. ಇದರಿಂದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದ್ದು, ಮೇಕೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. 25*18 ಅಡಿಯ ಈ ವಾದರಿ ಶೆಡ್ ಗ್ರಾಮದಲ್ಲಿ ಇದೇ ಪ್ರಥಮವಾಗಿದೆ.

    ತರಕಾರಿ ಬೆಳೆಯುವ ನಾವು, ಅನೇಕ ಬಾರಿ ಬೆಲೆ ಇಲ್ಲದೆ ನಷ್ಟ ಅನುಭವಿಸಿದ್ದೇವೆ. ಆದರೆ ಆಡು ಸಾಕಾಣಿಕೆಯಲ್ಲಿ ನಷ್ಟವಾಗಿಲ್ಲ. ಇದು ನಮ್ಮ ಕೈ ಹಿಡಿದಿದೆ. ಶೆಡ್ ನಿರ್ವಾಣದಿಂದ ಚಿರತೆ ದಾಳಿ ಹಾಗೂ ಕಳ್ಳರ ಆತಂಕ ದೂರವಾಗಿದೆ. ಮೇವು ವಾಡಿಕೊಂಡರೆ ಆಡುಗಳ ಸಾಕಾಣಿಕೆ ಸುಲಭ.
    ಮಂಜಮ್ಮ, ಬನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts