More

    ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ

    ಸೇಡಂ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಮುಚ್ಚುವ ಹಂತಕ್ಕೆ ಬಂದಿದ್ದು, ಸಧ್ಯದ ಆಡಳಿತ ಮಂಡಳಿ ಸೂಪರ್ ಸೀಡ್ಗೊಳಿಸಿ ಆಡಳಿತಾಧಿಕಾರಿ ನೇಮಿಸುವಂತೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಡಿಸಿಸಿ ಬ್ಯಾಂಕ್ ಮುಳುಗುವ ಹಂತಕ್ಕೆ ಬಂದು ತಲುಪಿದೆ. ಇನ್ನುಳಿದ ಜಿಲ್ಲೆಯಲ್ಲಿ ಸರಿ ಸುಮಾರು 3 ರಿಂದ 5 ಸಾವಿರ ಕೋಟಿಗಳ ವ್ಯವಹಾರ ನಡೆಸುವ ಮೂಲಕ ರೈತರಿಗೆ ನೆರವಾಗಿವೆ. ಆದರೆ ನಮ್ಮಲ್ಲಿ ಇರುವ 400 ಕೋಟಿ ಹಣದಲ್ಲಿ 350 ಕೋಟಿ ವಸೂಲಿಯೂ ಮಾಡದೇ ಬಿಟ್ಟಿದ್ದಾರೆ. ಇದಕ್ಕೆ ಸಧ್ಯದ ಆಡಳಿತ ಮಂಡಳಿಯೇ ನೇರ ಕಾರಣವಾಗಿದೆ. ಜೂ.13ರಂದು ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಗಿಯಲಿದ್ದು, ಯಾವುದೇ ಕಾರಣಕ್ಕೂ ಅವರನ್ನು ಮುಂದುವರಿಸದೆ ಸೂಪರ್ ಸೀಡ್ಗೊಳಿಸಿ ಸಕರ್ಾರದಿಂದಲೇ ಆಡಳಿತಾಧಿಕಾರಿ ನೇಮಿಸುವ ಮೂಲಕ ಬ್ಯಾಂಕ್ ರಕ್ಷಣೆಗೆ ಮುಂದಾಗಬೇಕು ಎಂದರು.
    ಈಗಾಗಲೇ ಮುಖ್ಯಮಂತ್ರಿ, ಸಹಕಾರ ಸಚಿವರಿಗೆ ಭೇಟಿಯಾಗಿ ಪರಿಸ್ಥಿತಿ ಮನವರಿಕೆ ಮಾಡಲಾಗಿದೆ. 15ವರ್ಷಗಳಿಂದ ಆಡಳಿತದಲ್ಲಿದ್ದ ನಿರ್ದೇಶಕರು ಬ್ಯಾಂಕ್ನ್ನು ಅವನತ್ತಿಯತ್ತ ಕೊಂಡೊಯ್ಯುದಿದ್ದು, ಅಲ್ಲಿಂದ ಇಲ್ಲಿವರೆಗೂ ನಡೆದ ವ್ಯವಹಾರಗಳ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ ವಿಶ್ವಬ್ಯಾಂಕ್, ನಬಾರ್ಡ ಬ್ಯಾಂಕ್ಗಳ ಮೂಲಕ ಸಾಲ ಕೊಡಿಸಬೇಕು, ಸಹಕಾರಿ ಬ್ಯಾಂಕ್ನಿಂದಲೂ ಹಣ ಸಂಗ್ರಹಕ್ಕೆ ಅನುಮತಿ ನೀಡಬೇಕು, ಸರ್ಕಾದಿಂದ 1 ಸಾವಿರ ಕೋಟಿ ವಿಶೇಷ ನೆರವು ನೀಡುವ ಮೂಲಕ ಬ್ಯಾಂಕ್ ಜೀವಂತವಾಗಿರಿಸಲು ಕಾಳಜಿ ವಹಿಸಲು ನಾನು ಕೋರಿದ್ದೇನೆ. ಇದರಿಂದಾಗಿ ನಮ್ಮ ಭಾಗದ ರೈತರಿಗೆ ಬಡ್ಡಿರಹಿತ ಸಾಲ ಸಿಗಲು ಅನುಕೂಲವಾಗಲಿದೆ. ತನಿಖೆಯಲ್ಲಿ ಅವ್ಯವಹಾರ ಸಾಬೀತಾದಲ್ಲಿ ಭಾಗಿಯಾದ ನಿದರ್ೇಶಕರಿಗೆ ಮುಂದಿನ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಬಾರದು ಎಂದರು.

    ರಾಜ್ಯದ ಮಂಡ್ಯ, ಮೈಸೂರು ಭಾಗದ ಸಹಕಾರಿ ಬ್ಯಾಂಕ್ಗಳಲ್ಲಿ ರೈತರಿಗೆ ಸಾಕಷ್ಟು ಬಡ್ಡಿರಹಿತ ಸಾಲ ಸಿಗುತ್ತದೆ. ಅಲ್ಲಿ ಹೀಗಾಗಿ ರೈತನ ಬದುಕು ಹಸನಾಗಿದೆ. ನಮ್ಮಲ್ಲಿಯೂ ರೈತರಿಗೆ ಸಹಕಾರಿ ಬ್ಯಾಂಕ್ಗಳ ಮೂಲಕ ಹೆಚ್ಚಿನ ಸಾಲ ದೊರೆಯಬೇಕಾದರೆ ಡಿಸಿಸಿ ಬ್ಯಾಂಕ್ ಉಳಿಯುವದು ಅವಶ್ಯವಾಗಿದೆ. ಸಾಲ ಸಿಗದೆ ಇರುವದರಿಂದ ರೈತಾಪಿ ವರ್ಗ ಕಂಗಾಲಾಗಿದೆ.
    | ರಾಜಕುಮಾರ ಪಾಟೀಲ್ ತೆಲ್ಕೂರ ಶಾಸಕ
    ಸೇಡಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts