More

    ಆಚರಣೆಯಲ್ಲಿ ಲಿಂಗಾಯತರಾಗಬೇಕು, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕರೆ, ದಿನಸಿ ಕಿಟ್ ವಿತರಣೆ, ರಕ್ತದಾನ ಶಿಬಿರ

    ದೊಡ್ಡಬಳ್ಳಾಪುರ: ಎಲ್ಲರನ್ನೂ ಸಮಾನವಾಗಿ ಕಂಡು, ಸರ್ವರ ಅಭಿವೃದ್ಧಿಗೆ ಸಹಕರಿಸುವ ಸಮುದಾಯ ನಮ್ಮದಾಗಬೇಕು. ಆದ್ದರಿಂದ ಲಿಂಗಾಯತರಾದವರು ಕೇವಲ ಹುಟ್ಟಿನಿಂದ ಲಿಂಗಾಯತರೆನಿಸಿಕೊಂಡರಷ್ಟೇ ಸಾಲದು, ಆಚರಣೆಯಲ್ಲೂ ಲಿಂಗಾಯತರಾಗಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಕರೆ ನೀಡಿದರು.

    ಪಟ್ಟಣದಲ್ಲಿ ಅಖಿಲ ಭಾರತ ವಿರಶೈವ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

    ವಿಶ್ವ ಗುರು ಬಸವಣ್ಣ ನೀಡಿರುವ ಲಿಂಗತ್ವ ಮಾದರಿಯಲ್ಲೇ ಭಾರತದ ಸಂವಿಧಾನ ರಚನೆಯಾಗಿರುವುದು ನಮ್ಮ ಹೆಗ್ಗಳಿಕೆಯಾಗಿದೆ. ಹೆಣ್ಣು ಮಕ್ಕಳಿಗೆ ಕನಿಷ್ಟ ಪಿಯುಸಿಯವರೆಗಾದರೂ ಶಿಕ್ಷಣ ನೀಡಿ, ಸಮಾಜವನ್ನು ತಿದ್ದುವ ಕಾರ‌್ಯದಲ್ಲಿ ಮುಂದಾಗಬೇಕಿದೆ. ಈ ಮೂಲಕ ಲಿಂಗಾಯತರು ಎಂದರೆ ಸುಶಿಕ್ಷಿತರು ಎಂಬುದು ಸಮಾಜದ ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
    ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ. ಲಿಂಗಾಯತ ಎಂಬುದು ಒಂದು ಜಾತಿ ಅಲ್ಲ, ಹಿಂದು ಸಮುದಾಯದಲ್ಲಿನ ದಲಿತರನ್ನೂ ಒಳಗೊಂಡು ಎಲ್ಲ್ಲ ಸಮುದಾಯಗಳ ಧರ್ಮವಾಗಿದೆ ಎಂದರು.

    ಹೊನ್ನಗವಿ ಮಠದ ರುದ್ರಮುನಿ ಶಿವಾಚಾರ‌್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಅಶೋಕ್, ಯುವ ಘಟಕದ ಅಧ್ಯಕ್ಷ ಜಿ. ಮನೋಹರ ಅಭಿಗೆರೆ, ಬೆಂ.ಗ್ರಾಮಾಂತರ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪುಟ್ಟ ಬಸವರಾಜು, ಜಿಲ್ಲಾ ಬಿಜೆಪಿ ವಕ್ತಾರರಾದ ಪುಷ್ಪಶಿವಶಂಕರ್, ಬಿಜೆಪಿ ನಗರಾಧ್ಯಕ್ಷ ಎಚ್.ಎಸ್. ವೆಂಕಟೇಶ್, ಮುಖಂಡರಾದ ಲತಾ ಆರಾಧ್ಯ, ನಾಗಸಂದ್ರ ಲೋಕೇಶ್, ಲೀಲಾ ಮಹೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts