More

    ಅ.7ರಿಂದ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ರುದ್ರಮುನಿ ಶ್ರೀಗಳ ಪುಣ್ಯಾರಾಧನೆ; 5 ದಿನ ಕಾರ್ಯಕ್ರಮ

    ಶಿಕಾರಿಪುರ: ಶತಮಾನ ಪೂರೈಸಿರುವ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳ ಕನಸಿನ ಕೂಸಾದ ಕಾಳೇನಹಳ್ಳಿ ಶಿವಯೋಗಾಶ್ರಮಕ್ಕೆ ಆಧ್ಯಾತ್ಮಿಕ, ಕಾಯಕ, ಸಾಮಾಜಿಕ ಕಳಕಳಿಯ ಚೈತನ್ಯ ತುಂಬಿದವರು ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಬುಧವಾರ ಸಮೀಪದ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳು ಒಬ್ಬ ಕಾಯಕಯೋಗಿ ಅಷ್ಟೇ ಅಲ್ಲ ಅವರೊಬ್ಬ ಪವಾಡ ಪುರುಷರಾಗಿದ್ದರು. ಬಸವಾದಿ ಪ್ರಮಥರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ನುಡಿದಂತೆ ನಡೆದ ಮಹಾಶಿವಯೋಗಿಗಳಾಗಿದ್ದರು. ಅವರ ಪರಿಚಯ ಇಡೀ ನಾಡಿನ ಜನತೆಗೆ ಆಗಬೇಕು ಪ್ರತಿವರ್ಷ ಅ.9ರಂದು ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಐದು ದಿನಗಳ ಕಾಲ ಆಯೋಜಿಸಲಾಗಿದೆ. ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆದೇಶದಂತೆ ಅ.7ರಿಂದ 11ರ ತನಕ ನಡೆಸಲು ನಿರ್ಧರಿಸಲಾಗಿದೆ ಎಂದರು.
    ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರೆನಿಸಿದ್ದರೆ, ಶ್ರೀ ರುದ್ರಮುನಿ ಶಿವಯೋಗಿಗಳು ಮಲೆನಾಡಿನ ರಮಣ ಮಹರ್ಷಿಗಳಾಗಿದ್ದರು. ಅವರ ಚಿಂತನೆಗಳು ಜನಮನ ತಲುಪಬೇಕು, ಅವರ ಕಾಯಕ ನಿಷ್ಠೆ, ಅನುಷ್ಠಾನ, ಪವಾಡಗಳ ಪರಿಚಯವಾಗಬೇಕು. ಆದ್ದರಿಂದ ಈ ಬಾರಿಯ ಅವರ ಪುಣ್ಯಾರಾಧನೆಯನ್ನು ಐದು ದಿನಗಳ ಕಾಲ ನಡೆಸಲು ಯೋಜಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts