More

    ಎಲ್ಲರೂ ಅರಿವಿನ ಮಾರ್ಗದಲ್ಲಿ ನಡೆಯೋಣ

    ಉಪ್ಪಿನಬೆಟಗೇರಿ: ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರ ತಿಳಿಸುವ ಧಾರ್ವಿುಕ ಕಾರ್ಯಕ್ರಮಗಳು ಜನರಲ್ಲಿ ಸಾಮರಸ್ಯ ಮೂಡಿಸಲು ಪೂರಕವಾಗಿವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

    ಮೌನಯೋಗಿ ಮಹಾಂತ ಶಿವಯೋಗಿಗಳವರ 58ನೇ ಪುಣ್ಯಸ್ಮರಣೆ ನಿಮಿತ್ತ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ವಾರದ ಆಧ್ಯಾತ್ಮಿಕ ಪ್ರವಚನದ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನಲ್ಲಿ ಸಂಸ್ಕಾರ ಒದಗಿಸುವುದರ ಜೊತೆಗೆ ಸನ್ಮಾರ್ಗದತ್ತ ಕರೆದೊಯ್ಯುವುದೇ ಧಾರ್ವಿುಕ ಕಾರ್ಯಕ್ರಮಗಳ ಉದ್ದೇಶ.

    ಇದರಿಂದ ಸಾಮಾಜಿಕವಾಗಿ ಒಗ್ಗಟ್ಟು ಕೂಡ ಸಾಧ್ಯ. ಈ ದಿಸೆಯಲ್ಲಿ ಮಹಾಂತ ಶಿವಯೋಗಿಗಳು ತೋರಿದ ಅರಿವಿನ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಗರಗ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಪ್ರಶಾಂತ ದೇವರು ಆಶೀರ್ವಚನ ನೀಡಿ, ಒಂದು ಜ್ಞಾನದ ಕೆರೆ, ಇನ್ನೊಂದು ಭಕ್ತಿಯ ಕೆರೆ ಎಲ್ಲಿ ತುಂಬಿರುತ್ತದೆಯೋ ಅಲ್ಲಿ ಆಧ್ಯಾತ್ಮಿಕ ಕಾರ್ಯ ನಡೆಯುತ್ತದೆ. ಅಂತಹ ಆಧ್ಯಾತ್ಮಿಕ ಕಾರ್ಯ ನರೇಂದ್ರದಲ್ಲಿ ಜರುಗುತ್ತಿದೆ. ನಾವು ಧರ್ಮ ಉಳಿಸಿದರೆ ಧರ್ಮ ನಮ್ಮನ್ನು ಉಳಿಸುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು ಎಂದರು.

    ಮಳೆಪ್ಪಜ್ಜನ ಮಠದ ಹಿರಿಯ ಶ್ರೀಗಳಾದ ದುಂಡಯ್ಯ ಸ್ವಾಮೀಜಿ ಹಾಗೂ ಧರ್ಮಾಧಿಕಾರಿ ಸಂಗಮೇಶ ದೇವರು ನೇತೃತ್ವವಹಿಸಿದ್ದರು. ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಯೋಗಿರಾಜೇಂದ್ರ ಖಾನಾಪೂರ ಪ್ರವಚನ ನೀಡಿದರು. ಮಳೆಪ್ಪಜ್ಜನಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಈಶ್ವರ ಗಾಣಿಗೇರ,

    ಗ್ರಾಪಂ. ಅಧ್ಯಕ್ಷ ನಾಗರಾಜ ಹಟ್ಟಿಹೊಳಿ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಬಸವಪ್ರಭು ಹುಂಬೇರಿ, ಪಿಕೆಪಿಎಸ್ ಅಧ್ಯಕ್ಷ ಶಿವಪ್ಪ ತಿರ್ಲಾಪೂರ, ಭಾರತ ಸೇವಾದಳ ತಾಲೂಕಾಧ್ಯಕ್ಷ ಮಂಜುನಾಥ ತಿರ್ಲಾಪೂರ, ತಾಪಂ ಮಾಜಿ ಸದಸ್ಯ ಮಹಾದೇವ ದಂಡಿನ, ಕರೆಪ್ಪ ಬಳಿಗೇರ, ಶಂಕ್ರಪ್ಪ ದುಬ್ಬನಮರಡಿ, ಸಂಗಮೇಶ ಮಾದರ, ಮಂಜುನಾಥ ಬಾರಕೇರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts