More

    ಅ.02ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ


    ಯಾದಗಿರಿ: ಬದಲಾಗುತ್ತಿರುವ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ಮನುಷ್ಯನಿಗೆ ಸಣ್ಣ ವಯಸ್ಸಿನಲ್ಲೇ ಮಾರಕ ಕಾಯಿಲೆಗಳು ಅಂಟಿಕೊಳ್ಳುತ್ತಿವೆ ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಾಜಶೇಖರ ಜಾಕಾ ತಿಳಿಸಿದರು.

    ಜಾಗತೀಕರಣದ ಇಂದಿನ ಕಾಲಘಟ್ಟದಲ್ಲಿ ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದಾನೆ. ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕಾರವನ್ನು ಮರೆಯುತ್ತಿರುವ ಪರಿಣಾಮ ಇಂದು ಹೆಸರೇ ಕೇಳದ ಕೆಲ ವ್ಯಾಗಳಿಗೆ ತುತ್ತಾಗುವ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಶನ್ ಸಂಶೋಧನಾ ಟ್ರಸ್ಟ್, ಮಣಿಪಾಲ್ ಹಾಗೂ ಸ್ಪರ್ಶ ಆಸ್ಪತ್ರೆ ಬೆಂಗಳೂರ ಆಶ್ರಯದಲ್ಲಿ ಅ.02 ರಂದು ನಗರದ ಬಾಲಕಿಯರ ಸಕರ್ಾರಿ ಪದವಿ ಪೂರ್ವಕಾಲೇಜು (ಸಪ್ನಾ ಗ್ರೌಂಡ್) ಮೈದಾನದಲ್ಲಿ ದಿ.ಚನ್ನಬಸಪ್ಪ ಜಾಕಾ ಮಗದಂಪೂರ ಸ್ಮರಣಾರ್ಥ ಬೃಹತ್ ಉಚಿತ ಕ್ಯಾನ್ಸರ್ತಪಾಸಣಾ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ನೈಸಗರ್ಿಕ ಅಸಮತೋಲನದಿಂದ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ರೋಗ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕಾಡುತ್ತಿದೆ. ಬರುವ 2025ರ ವರೆಗೆ ಜನಸಂಖ್ಯೆಯಲ್ಲಿ ಪ್ರತಿವರ್ಷ ಶೇ.12 ರಷ್ಟು ಪ್ರಮಾಣ ಹೆಚ್ಚಾಗಲಿದೆ. ಪ್ರತಿವರ್ಷ 7.50 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಾರ್ಯಕ್ರಮವನ್ನು ಗುರುಮಠಕಲ್ ಮತಕ್ಷೇತ್ರದ ಶಾಸಕ ನಾಗನಗೌಡಕಂದಕೂರ ಉದ್ಘಾಟಿಸುವರು. ನಗರ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್, ಜಿಲ್ಲಾಕಾರಿ ಸ್ನೇಹಲ್ ಆರ್., ಇನ್ನಿತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts