More

    ಅಹಿಂಸಾ ತತ್ತ್ವವುಳ್ಳ ಜೈನ ಧರ್ಮ ಶ್ರೇಷ್ಠ

    ಹಿಡಕಲ್ ಡ್ಯಾಂ: ಅಹಿಂಸಾ ತತ್ತ್ವ ಒಳಗೊಂಡಿರುವ ಜೈನ ಧರ್ಮ ಶ್ರೇಷ್ಠವಾದದ್ದು ಎಂದು ಅರಣ್ಯ, ಆಹಾರ ಸಚಿವ ಉಮೇಶ ಕತ್ತಿ ಹೇಳಿದರು. ಸಮೀಪದ ಶಿಂದಿಹಟ್ಟಿ ಗ್ರಾಮದಲ್ಲಿ ಏರ್ಪಡಿಸಿರುವ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಯಾಗದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

    ಜಗತ್ತಿನಲ್ಲಿಯೇ ಜೈನ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದೆ. ಜಗತ್ತಿನಲ್ಲಿ ಶಾಂತಿ ಪರಿಪಾಲನೆಯ ಮಾರ್ಗಗಳನ್ನು ನಾವು ಈ ಧರ್ಮದಲ್ಲಿ ಕಾಣಬಹುದು. ಪಂಚಕಲ್ಯಾಣ ಮಹೋತ್ಸವದಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಭಕ್ತಿಯಿಂದ ಯಶಸ್ವಿಗೊಳಿಸಿದ್ದು ಶ್ಲಾಘನೀಯ ಎಂದರು. ಪ.ಪೂ. 108 ಆಚಾರ್ಯ ಜಿನಸೇನಾ ಮುನಿಮಹಾರಾಜ ಸಾನ್ನಿಧ್ಯ ವಹಿಸಿ ಆತ್ಮ ಕಲ್ಯಾಣ ಕುರಿತು ಹೇಳಿದರು. ಪ.ಪೂ. 108 ಸ್ವಯಂಸಾಗರ ಮುನಿಮಹಾರಾಜ ಮಾತನಾಡಿ, ಧರ್ಮದ ಗ್ರಂಥಗಳನ್ನು ಪ್ರತಿಯೊಬ್ಬರೂ ಓದಿ ವಿದ್ಯೆ ಗಳಿಸಿದರೆ ಎಲ್ಲಿ ಬೇಕಾದರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

    ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ, ಮಾಜಿ ಅಧ್ಯಕ್ಷ ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಸಂಜಯ ನಿಲಜಗಿ, ಮಲ್ಲಪ್ಪ ಪಾಟೀಲ, ಸುರೇಂದ್ರ ಶೇರವಿ, ಬಾಹುಬಲಿ ನಾಗನೂರಿ, ರಮೇಶ ಕುಲಕರ್ಣಿ, ವಿ.ಕೆ. ಹುದ್ದಾರ, ರಾಜು ಶೇರವಿ, ಭೋಪಾಲ ಶೇರವಿ ಹಾಗೂ ಶ್ರಾವಕ-ಶ್ರಾವಕಿಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts