More

    ಅಶೋಕಗೌಡ ಅಧ್ಯಕ್ಷ, ಸಿದ್ದಪ್ಪ ಉಪಾಧ್ಯಕ್ಷ

    ಕಲಘಟಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ಬುಧವಾರ ಜರುಗಿತು. ಅಧ್ಯಕ್ಷ ಸ್ಥಾನ ಬಿಜೆಪಿ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗುವುದರೊಂದಿಗೆ ಅಚ್ಚರಿಯ ಫಲಿತಾಂಶ ಹೊರಬಿದ್ದಿತು.

    ಅಧ್ಯಕ್ಷರಾಗಿ ಹಿರೇಹೊನ್ನೀಹಳ್ಳಿ ಮತಕ್ಷೇತ್ರದ ಸದಸ್ಯ ಅಶೋಕಗೌಡ ಸುಭಾಸಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಬಮ್ಮಿಗಟ್ಟಿ ಮತಕ್ಷೇತ್ರದ ಸದಸ್ಯ ತಾವರಗೇರಿಯ ಸಿದ್ದಪ್ಪ ಕರಬಸಪ್ಪ ಕೂಡಲಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಘೊಷಿಸಿದರು.

    ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನೇರ ಹಣಾಹಣಿ ಏರ್ಪಟ್ಟಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಸಮಿತಿಯ ಎಲ್ಲ 16 ಸದಸ್ಯರು ಮತ ಚಲಾಯಿಸಿದರು. ಅಧ್ಯಕ್ಷ-ಉಪಾಧ್ಯಕ್ಷರಿಬ್ಬರು ಕ್ರಮವಾಗಿ 8-7 ಮತಗಳ ಅಂತರದಿಂದ ಜಯಶಾಲಿಯಾದರು. ಎರಡೂ ಸ್ಥಾನಗಳ ಮತದಾನದಲ್ಲಿ ಒಂದೊಂದು ಮತ ತಿರಸ್ಕೃತಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ನಿಕಟಪೂರ್ವ ಅಧ್ಯಕ್ಷ ರಜನಿಕಾಂತ ಬಿಜವಾಡ 1 ಮತದ ಅಂತರದಿಂದ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಕಲ್ಲವ್ವ ಸಂಗಪ್ಪ ಕುಬ್ಯಾಳ 1 ಮತದ ಅಂತರದಿಂದ ಸೋಲನುಭವಿಸಿದರು.

    ಎಪಿಎಂಸಿ ಸದಸ್ಯರಾದ ಅಶೋಕಗೌಡ ಪಾಟೀಲ, ರಜನಿಕಾಂತ ಬಿಜವಾಡ, ಸಿದ್ದಪ್ಪ ಕೂಡಲಗಿ, ಕಲ್ಲವ್ವ ಕುಬ್ಯಾಳ, ಬಸವ್ವ ದೊಡ್ಡಮನಿ, ಮುತ್ತಪ್ಪ ಅಂಗಡಿ, ಚನ್ನಬಸಪ್ಪ ಜಮ್ಮಿಹಾಳ, ಹನುಮಂತಪ್ಪ ಕಾಳಿ, ರುದ್ರಗೌಡ ಪಾಟೀಲ, ಮಂಜುನಾಥ ಧಾರವಾಡ, ಹೊಳೆಪ್ಪ ಸಾಲಿ, ಕಲ್ಲಪ್ಪ ನಿಗದಿ, ಮಂಜುನಾಥಗೌಡ ಮುರಳ್ಳಿ, ಸರ್ಕಾರದ ನಾಮನಿರ್ದೇಶಿತ ಸದಸ್ಯರಾದ ಕಲ್ಲಪ್ಪ ಪುಟ್ಟಪ್ಪನವರ, ಕಲ್ಲನಗೌಡ ಪಾಟೀಲ, ಯಲ್ಲವ್ವ ನೂಲ್ವಿ ಮತದಾನದಲ್ಲಿ ಪಾಲ್ಗೊಂಡಿದ್ದರು.

    ಎಪಿಎಂಸಿ ಕಾರ್ಯದರ್ಶಿ ಮಾದೇವಪ್ಪ ನಡುವಿನಮನಿ, ಕಾರ್ಯಾಲಯದ ಸಂತೋಷ ವಿವೇಕಿ, ಸುರೇಖಾ ತಡಸ, ವಾಸು ಲಮಾಣಿ, ಸಿದ್ದಪ್ಪ ಕೋಳೂರ, ಕಂದಾಯ ಇಲಾಖೆಯ ಸುರೇಶ ಕವಟಗಿ, ಮಂಜುನಾಥ ಕುಂಬಾರ, ಪ್ರಕಾಶ ಛಲವಾದಿ ಚುನಾವಣೆ ಕಾರ್ಯ ನಿರ್ವಹಿಸಿದರು.

    ಅಧ್ಯಕ್ಷರಾಗಿ ಅಶೋಕಗೌಡ ಪಾಟೀಲ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

    ರಜನಿಕಾಂತ ಬಿಜವಾಡ ಪೊಲೀಸ್ ವಶಕ್ಕೆ

    ಕೈ ಬೆಂಬಲಿತ ಅಭ್ಯರ್ಥಿ ರಜನಿಕಾಂತ ಬಿಜವಾಡ ಮಂಗಳವಾರ ತಾಲೂಕಿನ ಕಾಮಧೇನು ಗ್ರಾಮದ ನರೇಶ ಮಲೆನಾಡ ಅವರ ಫಾಮರ್್​ಹೌಸ್​ಗೆ ನುಗ್ಗಿ ದಾಂಧಲೆ ಮಾಡಿರುವ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ವಿಭಾಗದ ಡಿ.ಎಸ್.ಪಿ. ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಎಪಿಎಂಸಿ ಒಳಗೆ, ಹೊರಗೆ ಹೋಗುವ ದಾರಿಯುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಲಘಟಗಿ ಪೊಲೀಸ್ ಇನ್ಸ್​ಪೆಕ್ಟಕ್ ವಿಜಯ ಬಿರಾದಾರ, ಮಲ್ಲಪ್ಪ ಬಿದರಿ, ಜಯಂತ ಗೌಳಿ, ಮಂಜುನಾಥ, ಎಸ್​ಐ ಪಿ.ವೈ. ಕಾಳೆ, ಪ್ರೊಬೇಷನರಿ ಪಿಎಸ್​ಐ ರಾಜು ಮಮದಾಪುರ ಬಂದೋಬಸ್ತ್ ವಹಿಸಿದ್ದರು. ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣ ಎಪಿಎಂಸಿ ಆವರಣದಲ್ಲೇ ರಜನಿಕಾಂತ ಬಿಜವಾಡ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು.

    ಬಿಜೆಪಿ ವಿಜಯೋತ್ಸವ

    ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕಗೌಡ ಪಾಟೀಲ ಅಧ್ಯಕ್ಷರಾಗಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು.

    ಪಕ್ಷದ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕಾಧ್ಯಕ್ಷ ಬಸವರಾಜ ಶೆರೇವಾಡ, ನರೇಶ ಮಲೆನಾಡ, ಶಶಿಧರ ನಿಂಬಣ್ಣವರ, ವೈ.ಎನ್. ರಾಮನಾಳ, ಸಹದೇವಪ್ಪ ಧನಿಗೊಂಡ, ನಿಂಗಪ್ಪ ಸುತಗಟ್ಟಿ, ಎಸ್.ಎಂ. ಚಿಕ್ಕಣ್ಣವರ, ಸುರೇಶ ಶೀಲವಂತರ, ಸೋಮು ಕೊಪ್ಪದ, ಮಂಜು ಕಮತರ, ಶಶಿಧರ ಹುಲಿಕಟ್ಟಿ ಇತರರು ಪಾಲ್ಗೊಂಡಿದ್ದರು.

    ಶಾಸಕರ ಮನೆಯಲ್ಲಿ ಸಂಭ್ರಮಾಚರಣೆ

    ಶಾಸಕ ಸಿ.ಎಂ. ನಿಂಬಣ್ಣವರ ನಿವಾಸದಲ್ಲಿ ಸಂಭ್ರಮಾಚರಣೆ ನಡೆಯಿತು. ಮೋಹನ ಲಿಂಬಿಕಾಯಿ, ಜಯತೀರ್ಥ ಕಟ್ಟಿ, ಗದಿಗೆಪ್ಪ ಕಳ್ಳಿಮನಿ, ಕಲ್ಲಪ್ಪ ಪುಟ್ಟಪ್ಪನವರ, ಕಲ್ಲನಗೌಡ ಪಾಟೀಲ, ಲಕ್ಷ್ಮ ಮೇಲಿನಮನಿ, ಐ.ಸಿ. ಗೋಕುಲ, ನೀಲಕಂಠಗೌಡ ಪಾಟೀಲ, ಸದಾನಂದ ಚಿಂತಾಮಣಿ, ಚಂದ್ರಗೌಡ ಪಾಟೀಲ, ಮಹಾಂತೇಶ ಹೆಂಬ್ಲಿ, ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts