More

    ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನ ಮುದೇನೂರ ಗ್ರಾಮದಿಂದ ರಾಣೆಬೆನ್ನೂರಿಗೆ ಪೂರೈಸುವ 24*7 ಕುಡಿಯುವ ನೀರಿನ ಕಾಮಗಾರಿಯ ಪೈಪ್​ಲೈನ್ ಅಳವಡಿಕೆಗಾಗಿ ಮುದೇನೂರ ಗ್ರಾಮದ ಮುಖ್ಯರಸ್ತೆಯಲ್ಲಿ ಯಾವುದೇ ಮುನ್ಸೂಚನೆ ನೀಡದೇ ಹಾಗೂ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಗುಂಡಿ ತೋಡಿದ್ದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಮುದೇನೂರ ಮುಖ್ಯರಸ್ತೆ ಮಾರ್ಗವಾಗಿ ಸುತ್ತಲಿನ 15ಕ್ಕೂ ಅಧಿಕ ಗ್ರಾಮಗಳ ಜನತೆ ಹರಿಹರ, ದಾವಣಗೆರೆ ಸೇರಿ ವಿವಿಧ ಪಟ್ಟಣಗಳಿಗೆ ಓಡಾಡುತ್ತಿದ್ದರು. ಇದೀಗ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಯಾವುದೇ ಮುನ್ಸೂಚನೆ ನೀಡದೆ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ರಸ್ತೆಯುದ್ದಕ್ಕೂ ಗುಂಡಿಗಳನ್ನು ತೋಡಿ ಕೈ ಬಿಟ್ಟಿದ್ದಾರೆ. ಇದರಿಂದಾಗಿ ಜನರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದರು.

    ರೈತರು ಭತ್ತದ ನಾಟಿ ಮಾಡುವ ಸಮಯ ಇದಾಗಿದ್ದು, ಹೊಲಗಳಿಗೆ ಹೋಗಲಾಗದ ಸ್ಥಿತಿ ನಿರ್ವಣವಾಗಿದೆ. ಮಳೆ ಬಂದಾಗ ರಸ್ತೆಯ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕಾಮಗಾರಿಯನ್ನು ಕೂಡಲೆ ಮುಕ್ತಾಯಗೊಳಿಸಿ ರಸ್ತೆ ನಿರ್ವಿುಸಿಕೊಡಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ವಿ.ಆರ್. ಹಿರೇಗೌಡರ ಅವರಿಗೆ ಮನವಿ ಸಲ್ಲಿಸಿದರು. ರಾಜಶೇಖರಪ್ಪ ಗಂಗನಗೌಡ್ರ, ಹರಿಹರಗೌಡ ಪಾಟೀಲ, ಜಮಾಲಸಾಬ್ ಶೇಖಸನದಿ, ಬಸವರಾಜ ಎಲ್ಲಕ್ಕನವರ, ಹೊನ್ನಪ್ಪ ಪುಟ್ಟಪ್ಪನವರ, ಹನುಮಂತಪ್ಪ ಕೊಳ್ಳೇರ, ಅಕ್ಬರ್​ಸಾಬ್ ಶೇಖಸನದಿ, ಮಲಕಪ್ಪ ಲಿಂಗದಹಳ್ಳಿ, ಅಶೋಕಪ್ಪ ಗಂಗನಗೌಡ್ರ, ಮಂಜಪ್ಪ ಮುಷ್ಟೂರುನಾಯ್ಕರ, ಶಂಭನಗೌಡ ಪಾಟೀಲ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts