More

    ಅವಶ್ಯವಿದ್ದರೆ ಮಾತ್ರ ಪಟ್ಟಣಕ್ಕೆ ಬನ್ನಿ

    ಹಳಿಯಾಳ: ರೈತರು ತಮ್ಮ ಗ್ರಾಮಗಳಲ್ಲಿಯೇ ಉಳಿದು ಕೃಷಿ ಕಾಯಕದಲ್ಲಿ ತೊಡಗಿ, ಅವಶ್ಯಕವಾಗಿದ್ದರೆ ಮಾತ್ರ ಪಟ್ಟಣಕ್ಕೆ ಆಗಮಿಸಿ, ನಿಮ್ಮ ಕುಟುಂಬದವರು ಅನಗತ್ಯವಾಗಿ ಪಟ್ಟಣಕ್ಕೆ ಬರುವುದನ್ನು ತಡೆಯಿರಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.

    ಇಲ್ಲಿಯ ಕೃಷಿ ಇಲಾಖೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಳಿಯಾಳ ಹೋಬಳಿಯ ರೈತರಿಗೆ ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.

    ಲಾಕ್​ಡೌನ್​ದಿಂದಾಗಿ ದೇಶದಲ್ಲಿನ ಸಾಕಷ್ಟು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಅದನ್ನು ಸರಿದೂಗಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ನಿಭಾಯಿಸಲು ನಾವೆಲ್ಲರೂ ಕಟಿಬದ್ಧರಾಗೋಣ, ಅದರ ಜೊತೆಯಲ್ಲಿ ಮಹಾಮಾರಿ ಕರೊನಾ ತೊಲಗಿಸಲು ಪಣ ತೊಡೋಣ ಎಂದರು.

    ರಿಯಾಯಿತಿ ದರದಲ್ಲಿ ವಿತರಣೆ: ಬಿತ್ತನೆ ಬೀಜ ವಿತರಣೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ, ಹಳಿಯಾಳ, ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿ ಹಾಗೂ ಯಡೋಗಾದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಬಿತ್ತನೆ ಬೀಜ ಪಡೆಯಲು ಇಚ್ಛಿಸುವ ರೈತರು ತಮ್ಮ ಹೊಲದ ಇತ್ತೀಚಿನ ಆರ್​ಟಿಸಿ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಒದಗಿಸಿ ಪಡೆಯಬಹುದು ಎಂದರು. ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಆರ್. ಹೆರಿಯಾಲ ಇದ್ದರು.

    ಗ್ರಾಮೀಣ ಭಾಗದಲ್ಲಿ ಸಂಚಾರ: ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವರೆಲ್ಲರೂ ಸೋಂಕಿತರೆಂಬ ಭ್ರಮೆ ನಿಮ್ಮಲ್ಲಿ ಬೇಡ, ಅವರೆಲ್ಲರೂ ನಮ್ಮ ಜನರಾಗಿದ್ದು, ಸಂಕಷ್ಟದ ಸಮಯದಲ್ಲಿ ತಮ್ಮ ಸ್ವಕ್ಷೇತ್ರಕ್ಕೆ ಮರಳುತ್ತಿದ್ದಾರೆ ಅದಕ್ಕಾಗಿ ಅವರ ಮೇಲೆ ಸಂದೇಹ ವ್ಯಕ್ತಪಡಿಸಬೇಡಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಮನವಿ ಮಾಡಿದರು.

    ಬುಧವಾರ ತಾಲೂಕಿನ ತೇರಗಾಂವ ಜಿ.ಪಂ. ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ ಅವರು ಹವಗಿ ಗ್ರಾಮದಲ್ಲಿ್ಲ ಹಿರಿಯರನ್ನು ಭೇಟಿಯಾಗಿ ಮಾತನಾಡಿದರು. ಮಂಗಳವಾಡ, ಹುಣ್ಸವಾಡ, ಸಾತ್ನಳ್ಳಿ, ಅರ್ಲವಾಡ, ಹೋಮನಳ್ಳಿ ಭೇಟಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts