More

    ಅವಧಿಗೆ ಮುನ್ನವೇ ಹಣ್ಣಾಗುತ್ತಿದೆ ಕಾಫಿ, ಇಳುವರಿ ಕುಸಿಯುವ ಸಾಧ್ಯತೆ

    ಆಲ್ದೂರು: ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯದಿಂದ ಬಹುತೇಕ ಭಾಗಗಳಲ್ಲಿ ಅವಧಿಗೆ ಮುನ್ನವೇ ಕಾಫಿ ಹಣ್ಣಾಗುತ್ತಿರುವುದು ಬೆಳೆಗಾರರನ್ನು ಆತಂಕ್ಕೆ ದೂಡಿದೆ.,
    ಈ ಬಾರಿ ಮಾರ್ಚ್ ಆರಂಭದಲ್ಲೇ ಮಳೆಯಾಗಿದ್ದರಿಂದ ಕಾಫಿ ಬೇಗ ಹೂವಾಗಿದೆ. ಬೇಗ ಹೂ ಅರಳಿದ ಪರಿಣಾಮ ಕಾಫಿ ಕಾಯಿಗಳು ಬಲಿತು ಹಣ್ಣಾಗಲು ಪ್ರಾರಂಭಿಸಿವೆ. ಅವಧಿಗೆ ಮುನ್ನ ಸುರಿದ ಮಳೆಯಾಗಿದ್ದರಿಂದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರುತ್ತಿದೆ.
    ಅರೇಬಿಕಾ ಕಾಫಿ ತೋಟಗಳಲ್ಲಿ ಮೂರು ಬಾರಿ ಹೂ ಅರಳಿದ್ದರಿಂದ ಮೂರು ಹಂತದಲ್ಲಿ ಕಾಫಿ ಹಣ್ಣಾಗುತ್ತಿದೆ. ಕಾಫಿ ತೋಟದ ಮಧ್ಯೆ ಇರುವ ಕೆಲವು ಗಿಡಗಳಲ್ಲಿ ಕಾಫಿ ಹಣ್ಣಾಗುತ್ತಿದೆ. ಇದನ್ನು ಕಟಾವು ಮಾಡಲು ಸಾಧ್ಯವಾಗದೆ, ಇತ್ತ ಗಿಡದಲ್ಲಿ ಬಿಡಲೂ ಆಗದ ಸ್ಥಿತಿ ನಿರ್ವಣವಾಗಿದೆ.
    ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಾಮಾನ್ಯವಾಗಿ ಕಾಫಿ ಕಟಾವಿಗೆ ಬರುತ್ತದೆ. ಬೆಳೆಗಾರರಿಗೆ ಕಟಾವು ಮಾಡಿ ಒಣಗಿಸಲು ಅನುಕೂಲವಾಗುತ್ತದೆ. ಈ ಸಂದರ್ಭದಲ್ಲಿ ಕಾರ್ವಿುಕರು ಹೊರಜಿಲ್ಲೆಗಳಿಂದ ಬರುತ್ತಾರೆ. ಕಾರ್ವಿುಕರ ಕೊರತೆಯೂ ಕಾಡುವುದಿಲ್ಲ. ಆದರೆ ಈ ಬಾರಿ ಮಳೆ ಬೇಗ ಪ್ರಾರಂಭವಾದ್ದರಿಂದ ಕಾಫಿ ಆಗಸ್ಟ್​ನಲ್ಲಿಯೇ ಹಣ್ಣಾಗಲಾರಂಭಿಸಿದೆ. ಇದು ಬೆಳೆಗಾರರನ್ನು ಚಿಂತೆಗೀಡುಮಾಡಿದೆ.
    ವರ್ಷಧಾರೆಯಿಂದಾಗಿ ಕಾಳುಮೆಣಸಿನ ಕಾಳು ನೆಲಕ್ಕೆ ಉದುರಿದೆ. ಕಾಫಿ ಜತೆಗೆ ಆದಾಯ ಮೂಲವಾದ ಕಾಳುಮೆಣಸು ಬೆಳೆಯೂ ಕೈತಪ್ಪಿದರೆ ಬೆಳೆಗಾರರು ನಷ್ಟ ಅನುಭವಿಸುವುದು ನಿಶ್ಚಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts