More

    ಅವಗುಣ ಹೋಗಲಾಡಿಸುವ ಮಾರ್ಗ ವಿದ್ಯೆ

    ಸಂಕೇಶ್ವರ: ವಿದ್ಯೆ ಕೇವಲ ಜೀವನೋಪಾಯಕ್ಕಾಗಿ ಹಣ ಸಂಪಾದನೆಗಿರುವ ಮಾರ್ಗವಲ್ಲ. ಅದು ಮನುಷ್ಯನಲ್ಲಿನ ಅವಗುಣವನ್ನು ಹೋಗಲಾಡಿಸಿ ಮಾನವೀಯತೆಯಡೆಗೆ ಕೊಂಡೊಯ್ಯುವ ರಹದಾರಿ ಎಂದು ಚೆನ್ನೈ ರಾಮಕೃಷ್ಣಾಶ್ರಮದ ಮಹಾಮೇದಾನಂದ ಸ್ವಾಮೀಜಿ ಹೇಳಿದರು.

    ಸಮೀಪದ ನಿಡಸೋಸಿ ಹಿರಾಶುಗರ್ಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಪ್ರಸ್ತುತ ಕೇವಲ ಸಂಪಾದನೆಗಾಗಿ ವಿದ್ಯೆ ಕಲಿಯುವ ಪರಂಪರೆಯಲ್ಲಿ ಸಮಾಜ ಮುನ್ನಡೆಯುತ್ತಿರುವುದು ವಿಷಾದನೀಯ. ಮನುಷ್ಯನಲ್ಲಿರುವ ಅಂತರಾತ್ಮದ ಕೊಳಕಿನಿಂದ ಬೆಳಕಿನತ್ತ ಹೊರಬರಲು ಉತ್ತಮ ಮಾರ್ಗ ಆಯ್ಕೆಮಾಡಿಕೊಂಡರೆ ಅದು ವಿದ್ಯೆಯಾಗುತ್ತದೆ. ಹೀಗಾಗಿ ಸಕಾರಾತ್ಮಕ ಚಿಂತನೆಗಳತ್ತ ನಮ್ಮ ಬದುಕು ಸಾಗಿದರೆ ಭವಿಷ್ಯದ ಪೀಳಿಗೆಗೂ ಇದು ಮಾದರಿಯಾಗುತ್ತದೆ ಎಂದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಯಾವುದೇ ವಸ್ತು ನಿರುಪಯುಕ್ತವಲ್ಲ. ಕಸದಿಂದ ರಸ ತೆಗೆಯುವುದನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶ. ತಂತ್ರಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಂಡು ಮನುಷ್ಯ ತನ್ನ ಜೀವನವನ್ನು ಅತ್ಯುನ್ನತಗೊಳಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮಾನವೀಯ ಚಿಂತನೆಗಳು ಬಲಗೊಂಡಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಶಿಕ್ಷಣ, ಧಾರ್ಮಿಕತೆ ಹೀಗೆ ಎಲ್ಲ ಕ್ಷೇತ್ರಗಳು ತಮ್ಮದೇ ರೀತಿಯಲ್ಲಿ ಸನ್ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು. ಪ್ರಾಚಾರ್ಯ ಡಾ. ಎಸ್.ಸಿ. ಕಮತೆ ಸ್ವಾಗತಿಸಿದರು. ಡಾ. ಕೆ.ಎಂ. ಅಕ್ಕೋಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts