More

    ಅರ್ಥಪೂರ್ಣ ಅಮೃತ ಮಹೋತ್ಸವ ಆಚರಿಸೋಣ

    ಮುರಗೋಡ: ಸರ್ವ ಜನಾಂಗದ ಒಳತಿಗಾಗಿ ಐತಿಹಾಸಿಕ ಕ್ರಾಂತಿ ಮಾಡಿದ ನೀಲಕಂಠ ಸ್ವಾಮಿಗಳ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಕಾರ ಅವಶ್ಯ ಎಂದು ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಹೇಳಿದರು.

    ಸ್ಥಳೀಯ ಮಹಾಂತ ದುರದುಂಡೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೀಲಕಂಠ ಸ್ವಾಮಿಗಳ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಠಮಾನ್ಯಗಳ ಸಮಾಜಮುಖಿ ಕಾರ್ಯಗಳಿಂದ ಕಲಿಯುಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ. ಎಲ್ಲರಿಗೂ ಸಂಸ್ಕಾರ ನೀಡುವಲ್ಲಿ ಮಠಗಳ ಪಾತ್ರ ಪ್ರಮುಖವಾದದ್ದು. ಮುರಗೋಡ ಮಠದ ಅಭಿವೃದ್ಧಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.

    ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೀಲಕಂಠ ಸ್ವಾಮಿಗಳ ಅಮೃತ ಮಹೋತ್ಸವ ‘ನ ಭೂತೋ ನ ಭವಿಷ್ಯ ತಿ’ ಎಂಬಂತೆ ಆಚರಿಸಲಾಗುವುದು. ನೂರಾರು ಸ್ವಾಮಿಜೀಗಳ ಸಾನ್ನಿಧ್ಯದಲ್ಲಿ ಗುರುವಿನ ಸೇವೆ ಮಾಡುವುದಾಗಿ ತಿಳಿಸಿದರು.

    ಕುಂದರಗಿ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, 2023ರ ಜನವರಿ ತಿಂಗಳಲ್ಲಿ ಅಮೃತ ಮಹೋತ್ಸವ ಜರುಗಲಿದ್ದು, ಈಗಾಗಲೇ 75 ಗ್ರಾಮ, ಪಟ್ಟಣಗಳಲ್ಲಿ ಧರ್ಮ ಜಾಗೃತಿ ಸಭೆ ಯಶಸ್ವಿಯಾಗಿ ನಡೆದಿದೆ.

    ಜನವರಿ 19ರಿಂದ ಉಪ್ಪಿನ ಬೆಟಗೇರಿಯ ವಿರೂಪಾಕ್ಷ ಸ್ವಾಮಿಗಳು 45 ದಿನ ವಿಶ್ವ ಗುರು ಬಸವಣ್ಣವರ ಬಸವ ಪುರಾಣ ಪ್ರವಚನ ನೀಡಲಿದ್ದಾರೆ. ಹಂತ ಹಂತವಾಗಿ ರಾಜ್ಯ ಮಟ್ಟದ ಕೃಷಿ ಸಮ್ಮೇಳನ, ಹಾಜಿ ಮಾಜಿ ಸೈನಿಕರ ಬೃಹತ್ ಸಮಾವೇಶ, ರಾಜ್ಯ ಹೊರ ರಾಜ್ಯ ಮಠಾಧೀಶರ ಮಹಾಸಮಾವೇಶ, ಬೃಹತ್ ಮಹಿಳಾ ಸಮಾವೇಶ, ರಾಜ್ಯ ಮಟ್ಟದ ಸರ್ವಧರ್ಮ ಸಾಮೂಹಿಕ ವಿವಾಹ, ನೀಲಕಂಠ ಸ್ವಾಮಿಗಳ ತುಲಾಭಾರ ಸೇವೆ, ಶ್ರೀಮಠದ ನೂತನ ಗುರು ಭವನದ ಶಂಕು ಸ್ಥಾಪನೆ, ಶ್ರೀಮಠದ ಅಮೃತ ಮಹೋತ್ಸವ ಕುರಿತು ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಗಳು ಜರುಗಲಿವೆ ಎಂದರು.

    ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ನಿಗಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ರಾಜು ಚಿಕ್ಕನಗೌಡರ, ಸಿ.ಕೆ.ಮೆಕ್ಕೇದ, ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಮಠಮಾನ್ಯಗಳು ಸಮಾಜಕ್ಕೆ ಮಹಾನ್ ಕೊಡುಗೆ ನೀಡಿದ್ದು, ಪೂಜ್ಯರ ಅಮೃತ ಮಹೋತ್ಸವಕ್ಕೆ ತನು-ಮನ-ಮನದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಗ್ರಾಪಂ ಅಧ್ಯಕ್ಷ ಸಂಗಪ್ಪ ಬೆಳಗಾವಿ, ಕುಮಾರ ಪೂಜೇರಿ ಸ್ವಾಗತಿಸಿದರು. ಬಸವರಾಜ ಬ್ಯಾಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts