More

    ಅರ್ಜುನ ಕಪ್ ಕ್ರಿಕೆಟ್‌ ಪಂದ್ಯ ಶುಭಾರಂಭ

    ಚಿತ್ರದುರ್ಗ: ದುರ್ಗಾ ಇಲೆವೆನ್ ಕ್ರಿಕೆಟರ್ಸ್‌ನಿಂದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಅರ್ಜುನ ಕಪ್-2023 ಲೀಗ್ ಕಮ್ ನಾಕೌಟ್ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಕಾಂಗ್ರೆಸ್‌ ಮುಖಂಡ ಕೆ.ಸಿ.ನಾಗರಾಜ್‌ ಚಾಲನೆ ನೀಡಿದರು. ಚಾಲುಕ್ಯ ಹಾಗೂ ರಾಯಲ್ಸ್‌ ತಂಡಗಳ ನಡುವೆ ಮೊದಲ ಪಂದ್ಯ ನಡೆಯುವ ಮೂಲಕ ಶುಭಾರಂಭವಾಯಿತು.

    ಮಹಾನ್ ನಾಯಕರ ಸ್ಮರಣಾರ್ಥ, ಸಿನಿಮಾ ನಟರ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸುವುದು ಸಾಮಾನ್ಯ. ಆದರೆ, ಸತತ ಎಂಟು ಬಾರಿ ದಸರಾ ಅಂಬಾರಿ ಹೊತ್ತ ಆನೆ ಅರ್ಜುನನ ಸ್ಮರಣಾರ್ಥ ಹೊನಲು-ಬೆಳಕಿನ ಟೆನ್ನಿಸ್ ಬಾಲ್ ಟೂರ್ನಿ ಆಯೋಜಿಸಿರುವುದು ರಾಜ್ಯದಲ್ಲಿ ಇದೇ ಪ್ರಥಮ. ಚೆನೈ ಸೇರಿ ಕರ್ನಾಟಕದ ವಿವಿಧ ಭಾಗಗಳ 35 ತಂಡ ನೋಂದಾಯಿಸಿಕೊಂಡಿವೆ ಎಂದು ಮುಖಂಡ ಬಿ.ಕಾಂತರಾಜ್ ಮಾಹಿತಿ ಹಂಚಿಕೊಂಡರು.

    ಅರ್ಜುನ ಆನೆಯ ಮಾವುತರಾದ ರಾಜ, ವಿನು ಅವರನ್ನು ಕರೆಸಿ ಗೌರವಿಸಲಾಗುವುದು. 23ರಂದು ಸಂಪನ್ಮೂಲ ವ್ಯಕ್ತಿ ಧರ್ಮೇಂದ್ರಕುಮಾರ್ ಆನೆಗಳ ಕುರಿತು ಮಾಹಿತಿ ನೀಡಲಿದ್ದಾರೆ. 24ರ ಸಮಾರೋಪದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಬಹುಮಾನ: ಅರ್ಜುನ ಟ್ರೋಫಿಯೊಂದಿಗೆ ಪ್ರಥಮ 2 ಲಕ್ಷ ರೂ., ಬಲರಾಮ-ದ್ವಿತೀಯ 1 ಲಕ್ಷ ರೂ., ದ್ರೋಣ ಟ್ರೋಫಿ ತೃತೀಯ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದರ ಜತೆಗೆ ಉತ್ತಮ ಬ್ಯಾಟ್ಸ್‌ಮನ್, ಬೌಲರ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

    ಉದ್ಯಮಿ ಸುರೇಶ್‌ಬಾಬು, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮರ್ಚೆಂಟ್ಸ್‌ ಬ್ಯಾಂಕ್‌ನ ನಿರ್ದೇಶಕ ರಘುವೀರ್‌, ಮುಖಂಡರಾದ ಗೋಪಾಲಸ್ವಾಮಿ ನಾಯಕ, ಪರಮೇಶ್, ಸಿದ್ದೇಶ್, ರಾಮು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts