More

    ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ

    ಗುರ್ಲಾಪುರ, ಬೆಳಗಾವಿ: ಸಾರ್ವಜನಿಕರು ತಮ್ಮ ಕುಂದು-ಕೊರತೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಲಿಖಿತ ರೂಪದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕೆಂದು ತಾಲೂಕು ದಂಡಾಧಿಕಾರಿ ಡಿ.ಜಿ.ಮಹಾತ್ ಹೇಳಿದರು.

    ಸ್ಥಳೀಯ ಶ್ರೀ ಬಸವಜ್ಯೋತಿ ಸಹಕಾರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಹವಾಲು ನೀಡಿ, ಪರಿಹರಿಸಿಕೊಳ್ಳಿ. ಇಲ್ಲದಿದ್ದರೆ ಆದ್ಯತೆ ಮೇರೆಗೆ ಪರಿಗಣಿಸಿ ಸಮಸ್ಯೆ ನಿವಾರಣೆ ಮಾಡಲಾಗುವುದು. ತಾಲೂಕು ಮಟ್ಟದಲ್ಲಿ ಪರಿಹಾರವಾಗದೆ ಇದ್ದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಕೆಲವೊಂದನ್ನು ರಾಜ್ಯ ಸರ್ಕಾರಕ್ಕು ಸಹ ಸಲ್ಲಿಸಿ ಸಮಸ್ಯೆ ಬಗೆಹರಿಸುವ ಮೂಲಕ ಗ್ರಾಮ ವಾಸ್ತವ್ಯವನ್ನು ಸಾರ್ಥಕ ಮಾಡಬೇಕು ಎಂದರು.

    ಗ್ರಾಮಸ್ಥರ ಪರವಾಗಿ ಎಸ್.ಜಿ. ಹಂಚಿನಾಳ, ಮಹಾಲಿಂಗ ಹಂಚಿನಾಳ, ಆರ್.ಬಿ. ನೇಮಗೌಡರ ಮಾತನಾಡಿ, ನಮ್ಮ ಗ್ರಾಮವು ಮೂಡಲಗಿ ಪುರಸಭೆ ಖಾನಟ್ಟಿ ಗ್ರಾಪಂ ವ್ಯಾಪ್ತಿ ಹಾಗೂ ಹಳ್ಳೂರಲ್ಲಿ ಹಂಚಿಹೋಗಿದ್ದು ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ರಸ್ತೆಗಳು, ಪಶು ಆಸ್ಪತ್ರೆ, ಗ್ರಂಥಾಲಯ, ರಾಷ್ಟ್ರೀಕೃತ ಬ್ಯಾಂಕ್, ಸಾರ್ವಜನಿಕ ಆಸ್ಪತ್ರೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಪ್ರಾಥಮಿಕ ಶಾಲೆಯು ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಕಾಗದ ಪತ್ರಗಳು ಬರುತ್ತಿದ್ದು, ಅದು ಗ್ರಾಮೀಣವಾಗಬೇಕು. ಮೂಡಲಗಿ ಪುರಸಭೆಗೆ ಮೂಡಲಗಿ-ಗುರ್ಲಾಪುರ ಪುರಸಭೆ ಎಂದು ನಾಮಕರಣವಾಗಬೇಕು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಅಳತೆ ಮೀರಿ ಧ್ವನಿವರ್ಧಕ ಹಚ್ಚುವುದರಿಂದ ತೊಂದರೆಯಾಗುತ್ತಿದ್ದು, ಪೊಲೀಸ್ ಇಲಾಖೆಯವರು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
    ಬಿಇಒ ಅಜಿತ ಮನ್ನಿಕೇರಿ, ತಾಪಂ ಇಒ ಎಫ್.ಜಿ.ಚನ್ನನ್ನವರ, ಸಿಡಿಪಿಒ ಯಲ್ಲಪ್ಪ ಚಣ್ಣನ್ನವರ, ಆರೋಗ್ಯ ಅಧಿಕಾರಿ ಖಣದಾಳೆ, ತೋಟಗಾರಿಕಾ ಅಧಿಕಾರಿ ಜನ್ಮಟ್ಟಿ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗನ್ನವರ, ಶಾಖಾಧಿಕಾರಿ ಪಿ.ಆರ್.ಎಡಳ್ಳಿ, ಪಪಂ ತಾಲೂಕು ಅಧಿಕಾರಿ ಆಸಂಗಿ, ಎಎಸ್‌ಐ ಎಂ.ವಿ.ಮುರನಾಳ, ಸಾರಿಗೆ ನಿಯಂತ್ರಕ ಬಿ.ಬಿ.ದಂಡಾಪೂರ, ಬಿಇಒ ಬಸನಗೌಡ ಈಶ್ವರಪ್ಪಗೋಳ, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ, ಇಂಜಿನಿಯರ್ ಡಿ.ಬಿ.ಪಠಾಣ, ಗ್ರಾಮ ಲೆಕ್ಕಾಧಿಕಾರಿ ಬಾಗವಾನ, ಆರ್.ಸಿ. ಸತ್ತಿಗೇರಿ, ರಮೇಶ ನೇಮಗೌಡರ, ಮಹಾದೇವ ಮುಕ್ಕುಂದ, ಶಿವಬಸು ಮುಗಳಖೋಡ ಇತರರಿದ್ದರು. ಎಲ್ಲ ಅಧಿಕಾರಿಗಳನ್ನು ಲಕ್ಷ್ಮೀ ಪಿಕೆಪಿಎಸ್ ವತಿಯಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts