More

    ಅರಿವಿನಂತೆ ಬದುಕಿದರೆ ಯಶಸ್ಸು ಸಾಧ್ಯ

    ಸವಣೂರ: ಅರಿವೇ ಗುರು ಎಂಬುದನ್ನು ನಂಬಿದವರು ನಾವು. ನಮ್ಮ ಅರಿವು ನಮಗೆ ಮಾರ್ಗದರ್ಶನ. ಯಾರ ಅರಿವು ಸದಾ ಜಾಗೃತವಾಗಿರುತ್ತದೆ ಮತ್ತು ಅರಿವಿನ ಮಾತು ಕೇಳುತ್ತಾರೆ ಅವರು ಬದುಕಿನಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಸಾಧಕರಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ದೊಡ್ಡಹುಣಸೇ ಕಲ್ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂ. ಗುರು ರಾಚೋಟೇಶ್ವರ ಸ್ವಾಮೀಜಿ ಅವರ 46ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಹಾಗೂ ಕಲ್ಪವೃಕ್ಷಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಬದುಕಿನಲ್ಲಿ ನಿರಂತರವಾಗಿ ಮುಗ್ಧತೆ ಕಾಪಾಡುವುದು, ಆತ್ಮಸಾಕ್ಷಿಯಿಂದ ನಡೆಯುವುದು ಕಷ್ಟ. ಈ ಎರಡು ವಿಚಾರ ಪಾಲಿಸುವವರು ಸಾಧಕರಾಗುತ್ತಾರೆ. ಬಸವಾದಿ ಶರಣರು, ಪರಮಪೂಜ್ಯರು ಹೇಳುವುದು ಒಂದೇ ಅದು ಮಾನವಧರ್ಮ ಎಂದರು.

    ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ಶ್ರೀಮಠದಿಂದ ಕೊಡಮಾಡುವ ಕಲ್ಪವೃಕ್ಷಶ್ರೀ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಪಿಸಿದರು.

    ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಡಿ.ಎಸ್. ಮಾಳಗಿ, ರಾಜ್ಯಸಭೆ ಸದಸ್ಯ ವಿನಯ ತೆಂಡೂಲ್ಕರ್, ಬಿ.ಎಂ. ಪಾಟೀಲ, ರಾಜಶೇಖರ ಕಾತರಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts