More

    ಉಪ್ಪಿನಬೆಟಗೇರಿಯಲ್ಲಿ ವಿರೂಪಾಕ್ಷೇಶ್ವರ ಮಹಾರಾಜರ ರಥೋತ್ಸವ

    ಉಪ್ಪಿನಬೆಟಗೇರಿ: ಶಿವಾಯ ನಮಃ ಓಂ ….. ಓಂ ನಮಃ ಶಿವಾಯ….. ಹರಹರ ಮಹಾದೇವ ಶ್ರೀ ವಿರೂಪಾಕ್ಷೇಶ್ವರ ಮಹಾರಾಜ ಕೀ ಜೈ ಎಂಬ ಉದ್ಘೋಷಗಳೊಂದಿಗೆ ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆ ಹಣ್ಣು ಮತ್ತು ಉತ್ತತ್ತಿ ತೂರಿದರು.

    ಉಪ್ಪಿನಬೆಟಗೇರಿ ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಪುಣ್ಯಾರಾಧನೆ ನಿಮಿತ್ತ ಶನಿವಾರ ಸಂಜೆ ಜರುಗಿದ ರಥೋತ್ಸವದಲ್ಲಿ ಕಂಡು ಬಂದ ಭಕ್ತ ಸಮೂಹದ ಸಂಭ್ರಮದ ದೃಶ್ಯಗಳಿವು.

    ವಿರೂಪಾಕ್ಷಜ್ಜನ ಮೂಲ ಗದ್ದುಗೆಯಿಂದ ಆರಂಭಗೊಂಡ ರಥವನ್ನು ಸುಮಾರು 200 ಮೀಟರ್ ಉದ್ದದ ಪಾದಗಟ್ಟೆಯವರೆಗೆ ಎಳೆದುಕೊಂಡು ಹೋದ ಭಕ್ತರು ಮರಳಿ ಮೂಲ ಸ್ಥಳಕ್ಕೆ ತಂದರು. ವಿವಿಧ ಭಜನಾ ಮಂಡಳಿಗಳಿಂದ ಶಿವಭಜನೆ ಸೇರಿ ಸಕಲ ವಾದ್ಯಮೇಳಗಳು, ಸಹಸ್ರಾರು ಭಕ್ತರ ಹಷೋದ್ಘಾರದ ಮಧ್ಯೆ ರಥೋತ್ಸವ ಕಳೆಗಟ್ಟಿತ್ತು.

    ಅಡ್ಡ ಪಲ್ಲಕ್ಕಿ ಉತ್ಸವ: ಸಂಜೆ 4 ಘಂಟೆಗೆ ಮೂರುಸಾವಿರ ವಿರಕ್ತಮಠದಲ್ಲಿ ಸುಂದರವಾಗಿ ಅಲಂಕರಿಸಿದ್ದ ಹೂವಿನ ಅಡ್ಡ ಪಲ್ಲಕ್ಕಿಯಲ್ಲಿ ಕುಂದಗೋಳ ಕಲ್ಯಾಣಪುರ ಸಂಸ್ಥಾನಮಠದ ಶ್ರೀ ಬಸವಣ್ಣಜ್ಜನವರ ಜಂಗಮೋತ್ಸವ ಸುಮಂಗಲೆಯರ ಪೂರ್ಣ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಪೇಟೆ ಮಠ ತಲುಪಿತು. ಅಲ್ಲಿ ಪಾದ ಪೂಜೆ ನೆರವೇರಿಸಿದ ನಂತರ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಆಗಮಿಸಿತು.

    ನಂತರ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಪ್ರಭು ನೀಲಕಂಠ ಸ್ವಾಮೀಜಿ, ಸಂಗಮೇಶ ದೇವರು, ಮಮದಾಪೂರದ ಮುರುಘೕಂದ್ರ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಪ್ರಭು ದೇವರು, ನಿರುಪಾದಿ ದೇವರು, ಬಯಲುಸೀಮೆ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ, ಅಶೋಕ ಮಸೂತಿ, ಕಲ್ಲಪ್ಪ ಪುಡಕಲಕಟ್ಟಿ, ರವೀಂದ್ರ ಯಲಿಗಾರ, ಚನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ವೀರಣ್ಣಾ ಪರಾಂಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts