More

    ಅಮ್ಮಾಜಿ ಕೆರೆಯಲ್ಲಿ ದನದ ಮಾಂಸ!

    ಮುಂಡಗೋಡ: ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಅಮ್ಮಾಜಿ ಕೆರೆಯಲ್ಲಿ ಭಾನುವಾರ ಕೆಲ ಕಿಡಿಗೇಡಿಗಳು ದನದ ಮಾಂಸದ ತ್ಯಾಜ್ಯ ಎಸೆದು ಹೋಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

    ಮಾರಿಕಾಂಬಾ ದೇವಸ್ಥಾನದ ಅನತಿ ದೂರದಲ್ಲಿರುವ ಅಮ್ಮಾಜಿ ಕೆರೆಯಲ್ಲಿ ದನ-ಕರುಗಳು ನೀರು ಕುಡಿಯುತ್ತವೆ. ಅಮ್ಮಾಜಿ ಕೆರೆಯ ಪಕ್ಕದಲ್ಲಿಯೇ ಮುಖ್ಯ ರಸ್ತೆ ಹಾದು ಹೋಗಿದ್ದು ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳ ಮತ್ತು ಜನಸಂಚಾರ ಇರುತ್ತದೆ. ಈಗ ದನದ ಮಾಂಸದ ತ್ಯಾಜ್ಯವನ್ನು ಎಸೆದಿರುವುದರಿಂದ ದುರ್ನಾತ ಬೀರುತ್ತಿದೆ.

    ಶನಿವಾರ ಬಕ್ರೀದ್ ಹಬ್ಬವಾದ ಕಾರಣದಿಂದ ಈ ರೀತಿಯಾಗಿ ದನದ ಹಾಳು ಮಾಂಸವನ್ನು ಎಸೆದು ಹೋಗಿದ್ದಾರೆ. ಮಾಂಸವನ್ನು ತಮ್ಮ ಮನೆಯ ಹಿತ್ತಲಲ್ಲಿ ಅಥವಾ ಬೇರೆ ಕಡೆಗೆ ಹುಗಿಯಬಹುದಾಗಿತ್ತು. ನಾವು ದಸರಾ ಹಬ್ಬದಲ್ಲಿ ದೇವಿ ಪೂಜೆ ಮಾಡುವ ಅಮ್ಮಾಜಿ ಕೆರೆಯಲ್ಲಿ ಮಾಂಸವನ್ನು ಎಸೆಯಬಾರದಾಗಿತ್ತು. ನಿಜಕ್ಕೂ ನೋವಿನ ಸಂಗತಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ಸಂಬಂಧಪಟ್ಟ ಇಲಾಖೆಯವರು ನೋಡಿಕೊಳ್ಳಬೇಕು ಎಂದು ಹಳೂರ ಓಣಿ ನಿವಾಸಿ ಉದಯ ಬೆಂಡಲಗಟ್ಟಿ ಆಗ್ರಹಿಸಿದ್ದಾರೆ.

    ಅಮ್ಮಾಜಿ ಕೆರೆಯಲ್ಲಿ ದನದ ಮಾಂಸದ ತ್ಯಾಜ್ಯ ಎಸೆದ ಬಗ್ಗೆ ಸಾರ್ವಜನಿಕರ ಮೂಲಕ ಗಮನಕ್ಕೆ ಬಂದ ನಂತರ ಅದನ್ನು ತೆರವುಗೊಳಿಸಲಾಯಿತು. ತಪ್ಪಿತಸ್ಥರು ಯಾರೆಂದು ತಿಳಿದರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು.

    | ಸಂಗನಬಸಯ್ಯ ಪ.ಪಂ. ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts