More

    ಅಭಿವೃದ್ಧಿ ಕೆಲಸಕ್ಕೆ ಬೆಂಬಲ ನೀಡಿ

    ನಾಗಮಂಗಲ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಏನಾಗಿದೆ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಮತದಾರರು ಯೋಚಿಸಿ ಬೆಂಬಲಿಸುವಂತೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

    ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಜಿನ್ನೇನಹಳ್ಳಿಪಾಳ್ಯ, ಕಂಚಹಳ್ಳಿ, ಕಂಬದಹಳ್ಳಿ ಹಾಗೂ ರಾಮಚಂದ್ರ ಅಗ್ರಹಾರ ಮುಂತಾದ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಗೆದ್ದು ಶಾಸಕರಾದವರು ತಾಲೂಕಿನಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ? ನನಗಿಂತಲೂ ಮಿಗಿಲಾಗಿ ತಾಲೂಕನ್ನು ಅಭಿವೃದ್ಧಿಪಡಿಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ತಾಲೂಕು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದ್ದು, ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದರು.

    ಜಿನ್ನೇನಹಳ್ಳಿ ಪಾಳ್ಯದ ರಸ್ತೆ ಸೇರಿದಂತೆ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ನಾನು ಶಾಸಕನಾದ ನಂತರ ಮೊದಲ ಕೆಲಸವೇ ಜಿನ್ನೇನಹಳ್ಳಿ ರಸ್ತೆ ಅಭಿವೃದ್ಧಿಪಡಿಸುವುದಾಗಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆ, 123 ಸ್ಥಾನ ಗೆಲ್ಲಿಸಿದರೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ, ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎನ್ನುತ್ತಾರೆ. ರಾಷ್ಟ್ರೀಯ ಪಕ್ಷಗಳೇ 120 ಸ್ಥಾನಗಳನ್ನು ಗೆಲ್ಲಲು ತಿಣುಕಾಡುತ್ತಿರುವಾಗ ಇವರು 123 ಸ್ಥಾನ ಗೆಲ್ಲವುದು ಸತ್ಯಕ್ಕೆ ದೂರವಾದ ಮಾತು. ಇದನ್ನು ಅರಿತೇ ಕುಮಾರಸ್ವಾಮಿ ಅವರು ಹೀಗೆ ಹುಸಿ ಭರವಸೆ ನೀಡುತ್ತಾರೆ ಎಂದು ಟೀಕಿಸಿದರು.
    ಬಿಂಡಿಗನವಿಲೆ ಗ್ರಾಪಂ ಉಪಾಧ್ಯಕ್ಷ ಸುಪ್ರೀತ್‌ಕುಮಾರ್, ದೊಡ್ಡಬಾಲ ಗ್ರಾಪಂ ಸದಸ್ಯ ಕುಮಾರ್, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಎನ್.ಟಿ.ಕೃಷ್ಣಮೂರ್ತಿ, ಕಂಚಹಳ್ಳಿಗೌಡಪ್ಪ, ತುರುಬನಹಳ್ಳಿ ರಾಜೇಗೌಡ, ಹರೀಶ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts