More

    ಅಭಿವೃದ್ಧಿ ಕಾರ್ಯ ಹರಿಯುವ ನೀರಾಗದಿರಲಿ

    ಬಸವನಬಾಗೇವಾಡಿ: ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಮನಗೂಳಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿಕೋಶ, ಪಟ್ಟಣ ಪಂಚಾಯಿತಿ ಮನಗೂಳಿ ಸಹಯೋಗದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಒಬ್ಬ ರಾಜಕಾರಣಿ ಅಭಿವೃದ್ಧಿಯ ಕನಸು ಕಾಣಬೇಕು. ನನ್ನ ಕನಸೂ ಅಭಿವೃದ್ಧಿಯೇ ಆಗಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಮತ್ತು ಸರ್ಕಾರದಲ್ಲಿ ಗಟ್ಟಿ ಧ್ವನಿ- ಧೈರ್ಯದಿಂದ ಹಣ ತರುವ ಕೆಲಸವಾದಾಗ ಮಾತ್ರ ನಾವು ಕಂಡ ಕನಸು ನನಸಾಗಲು ಸಾಧ್ಯ. 2021/22ನೇ ಸಾಲಿನ ಅಮೃತ ನಗರೋತ್ಥಾನ ಯೋಜನೆ 5 ಕೋಟಿ ರೂ.ಗಳ 1ನೇ ಪ್ಯಾಕೇಜ್‌ನಲ್ಲಿ 1.39ಲಕ್ಷ ರೂ.ಸಿಸಿ ರಸ್ತೆ, ಚರಂಡಿ ಹಾಗೂ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 61.93ಲಕ್ಷ ರೂ.ಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

    ಮನಗೂಳಿ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಅನುದಾನ ತಂದು ಪಟ್ಟಣದಲ್ಲಿ ರಸ್ತೆ, ಸಿಸಿ ರಸ್ತೆ, ಚರಂಡಿ, ಕುಡಿವ ನೀರು, ವಿದ್ಯುತ್ ಸೇರಿ ಹೆಣ್ಣುಮಕ್ಕಳಿಗೆ ಸರ್ಕಾರಿ ಡಿಗ್ರಿ ಕಾಲೇಜ್, ವಸತಿ ಶಾಲೆ ಮತ್ತಿತರ ಯೋಜನೆಗಳನ್ನು ತರಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಮನಗೂಳಿ ಅಭಿವೃದ್ಧಿ ಹೊಂದಿದ ಪಟ್ಟಣವಾಗಿ ಹೊರಹೊಮ್ಮಿದೆ ಎಂದರು.

    ಶಾಸಕನಾದ ಬಳಿಕ ಮೊದಲು ಮನಗೂಳಿಯಿಂದ ಬಸವನಬಾಗೇವಾಡಿವರೆಗೆ ರಸ್ತೆ ಅಭಿವೃದ್ಧಿಪಡಿಸಲಾಯಿತು. ಸದ್ಯ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯನ್ನಾಗಿ ನಿರ್ಮಿಸಿದ್ದರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಹೆದ್ದಾರಿ ಪಕ್ಕ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿವೆ. ಅನೇಕ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಶೀಘ್ರದಲ್ಲೇ ಮನಗೂಳಿ ಪಟ್ಟಣದ ರಾಜ್ಯ ಹೆದ್ದಾರಿ ಮಧ್ಯೆ 2.50 ಕೋಟಿ ರೂ.ಗಳಲ್ಲಿ ವಿದ್ಯುದ್ದೀಪದ ಕಂಬಗಳನ್ನು ನಿರ್ಮಿಸಿ ಸೌಂದರ್ಯ ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಶರಣಯ್ಯ ನಂದಿಕೋಲಮಠ, ಶಿವನಗೌಡ ಗುಜಗೊಂಡ, ಯಲ್ಲಪ್ಪ ರೊಳ್ಳಿ, ಶ್ರೀಕಾಂತ ಸಾರವಾಡ, ರೇವಣಸಿದ್ದಪ್ಪ ಕೊಟಗೊಂಡ, ಗುರುಲಿಂಗಯ್ಯ ಕಾರಜೋಳಮಠ, ಬಸವರಾಜ ಸೋಂಪುರ್, ಹನುಮಂತ ಕೂಡಗಿ, ಸಲೀಂ ನಾಗಠಾಣ, ಮಲ್ಲನಗೌಡ ಪಾಟೀಲ, ಶಂಕರ ಶಿವಮಥ, ಶಿವಾನಂದ ಹುಕಮ್ನಾಳ, ರಮೇಶ ತೊರವಿ, ಶೇಖರಗೌಡ ಬಿರಾದಾರ, ಪರಸಪ್ಪ ಬಿದರಿ, ಸುಭಾಸ ಲಕ್ಕಪ್ಪಗೋಳ, ಪಪಂ ಮುಖ್ಯಾಧಿಕಾರಿ ಶಬ್ಬೀರ್ ರೇವೂಡಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts