More

    ಅಭಯಾರಣ್ಯ ವ್ಯಾಪ್ತಿಗೆ ಜಿಲ್ಲೆ ಬೇಡ

    ಸಿದ್ದಾಪುರ: ಅಭಯಾರಣ್ಯ ಎನ್ನುವುದು ಪ್ರಾಣಿಗಳ ಹಿತ ಕಾಪಾಡುವುದಕ್ಕಾಗಿ. ಅವುಗಳ ಅಭಿವೃದ್ಧಿ ಅದರ ಮುಖ್ಯ ಗುರಿಯಾಗಿದೆ. ಆದರೆ ಜನ ವಸತಿ ಇರುವ ಪ್ರದೇಶವನ್ನು ಅಭಯಾರಣ್ಯ ಎಂದು ಘೊಷಿಸುವುದರಿಂದ ಅಲ್ಲಿರುವ ಜನರ ಸ್ವಾತಂತ್ರ್ಯ ಹರಣ ಮಾಡಿದಂತಾಗುತ್ತದೆ. ಸರ್ಕಾರ ಕೂಡಲೆ ಅಭಯಾರಣ್ಯ ವ್ಯಾಪ್ತಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಹೊರಗಿಡಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಆಗ್ರಹಿಸಿದರು.

    ತಾಲೂಕಿನ ತಂಡಾಗುಂಡಿ ಗ್ರಾಪಂ ವ್ಯಾಪ್ತಿಯ ಕುಳ್ಳೆ ಗ್ರಾಮದಲ್ಲಿ ಅಭಯಾರಣ್ಯ ಹೋರಾಟ ಸಮಿತಿ ಮಂಗಳವಾರ ಆಯೋಜಿಸಿದ್ದ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರು ದೌರ್ಜನ್ಯ ಎಸುಗುತ್ತಿದ್ದಾರೆ. ಅರಣ್ಯದ ಕಿರು ಉತ್ಪನ್ನದಿಂದ ಸಾಕಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಅವರೆಲ್ಲರೂ ಈಗ ದುಡಿಮೆ ಇಲ್ಲದೆ ಉಪವಾಸವಿರಬೇಕಾಗುತ್ತದೆ. ಇದೆಲ್ಲವೂ ದೊಡ್ಡಮಟ್ಟದಲ್ಲಿ ಸಮಸ್ಯೆಯಾಗುತ್ತದೆ. ಸರ್ಕಾರ ಅಭಯಾರಣ್ಯ ಘೊಷಣೆ ಮಾಡುವ ಮೊದಲು ಜನಾಭಿಪ್ರಾಯವನ್ನು ಪಡೆದಿಲ್ಲ. ಸರಿಯಾದ ಅಧ್ಯಯನವನ್ನೂ ಮಾಡಿಲ್ಲ. ಇದೊಂದು ಕಾನೂನು ಬಾಹೀರ,ಅವೈಜ್ಞಾನಿಕ ಯೋಜನೆ. ಇಂತಹ ಯೋಜನೆಯನ್ನು ಜಾರಿಮಾಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿರುವುದು ಆಶ್ಚರ್ಯ ಉಂಟು ಮಾಡುತ್ತದೆ ಎಂದರು. ಹೆಗ್ಗರಣೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ ಮಾತನಾಡಿ, ನಮ್ಮನ್ನು ಜನಪ್ರತಿನಿಧಿಗಳು ಆಳುತ್ತಿಲ್ಲ, ಐಎಎಸ್ ಅಧಿಕಾರಿಗಳು ಆಳುತ್ತಿದ್ದಾರೆ. ಹೀಗಾಗಿ ನಮ್ಮ ನೋವು ಸರ್ಕಾರಕ್ಕೆ ತಟ್ಟುತ್ತಿಲ್ಲ ಎಂದರು. ಹೆಗ್ಗರಣೆ ಗ್ರಾಪಂ ಅಧ್ಯಕ್ಷ ಸುಮನಾ ಹೆಗಡೆ, ಉಪಾಧ್ಯಕ್ಷ ಮಹೇಶ, ತಂಡಾಗುಂಡಿ ಗ್ರಾಪಂ ಉಪಾಧ್ಯಕ್ಷ ಹರಿಹರ ನಾಯ್ಕ, ಎಪಿಎಂಸಿ ಸದಸ್ಯ ಸೀತಾರಾಮ ಗೌಡ, ವಿ.ಕೆ.ಜೋಶಿ, ಗ್ರಾಪಂ ಸದಸ್ಯ ಎಂ.ಪಿ.ಗೌಡ, ಚಂದ್ರಕಾಂತ ಗೌಡ, ಚೌಡು ಗೌಡ, ದ್ಯಾವಾ ಗೌಡ, ಶೇಖರ ನಾಯ್ಕ, ಗಣೇಶ ನಾಯ್ಕ ಹೊನ್ನಾವರ, ರಾಮ ಮರಾಠೆ ಇತರರಿದ್ದರು. ನಾಗಪತಿ ಗೌಡ, ಮಂಜುನಾಥ ಗೌಡ, ಈಶ್ವರ ಗೌಡ ನಿರ್ವಹಿಸಿದರು.ಇದಕ್ಕೂ ಮೊದಲು ತಂಡಾಗುಂಡಿ, ಹೆಗ್ಗರಣೆ ಹಾಗೂ ನಿಲ್ಕುಂದ ಗ್ರಾಪಂ ವ್ಯಾಪ್ತಿಯ ಮುನ್ನೂರಕ್ಕೂ ಹೆಚ್ಚು ಜನ ಹೆಗ್ಗರಣೆಯಿಂದ ಐದು ಕಿಮೀ ದೂರದ ಕುಳ್ಳೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ನಮ್ಮ ಜಿಲ್ಲೆಯ ಗ್ರಾಮಗಳನ್ನು ಅಭಯಾರಣ್ಯಕ್ಕೆ ಸೇರಿಸುವ ಅಗತ್ಯ ಇಲ್ಲ ಎಂಬ ತೀರ್ಮಾನ ಕೈಗೊಳ್ಳುವಂತೆ ಮಾಡಬೇಕು.
    | ಎ. ರವೀಂದ್ರ ನಾಯ್ಕ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts