More

    ಅಪಾಯಕ್ಕೆ ಬಾಯ್ತೆರೆದ ಚರಂಡಿ

    ಬಸವರಾಜ ಕಲಾದಗಿ ಬೈಲಹೊಂಗಲ, ಬೆಳಗಾವಿ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪಕ್ಕದ ಹರಳಯ್ಯ ಕಾಲನಿಯ ಮೀನುಗಾರಿಕೆ ಕಚೇರಿ ಎದುರುಗಿನ ವಾರ್ಡ್ ನಂಬರ್ 7ರಲ್ಲಿ ಗಟಾರ ಕುಸಿದು ಮೃತ್ಯುಕೂಪವಾಗಿ ಪರಿಣಮಿಸಿದೆ.

    ಆದರೂ ಪುರಸಭೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಕ್ಕಟ್ಟಾದ ರಸ್ತೆಯಲ್ಲಿ ಗಟಾರ್ ಕುಸಿದು ವರ್ಷಗಳೇ ಕಳೆದಿವೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಹಾಗೂ ವಯೋವೃದ್ಧರು ಅಡ್ಡಾಡುವಾಗ ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆ ಸಾಕಷ್ಟಿವೆ. ಕುಡಿಯುವ ನೀರಿಗಾಗಿ ಕೊಡ ಹೊತ್ತು ಮಹಿಳೆಯರು ಇದೇ ಮಾರ್ಗದಲ್ಲೆ ಸಾಗಬೇಕು. ಇನ್ನು ರಾತ್ರಿ ಹೊತ್ತು ವಿದ್ಯುತ್ ವ್ಯವಸ್ಥೆ ಇಲ್ಲದಿದ್ದರಿಂದ ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ನಿರ್ಲಕ್ಷ್ಯಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ಕೂಡಲೇ ಸಮಸ್ಯೆಯನ್ನು ಇತ್ಯರ್ಥ ಗೊಳಿಸದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗವುದು ಎಂದು ಅಲ್ಲಿನ ನಿವಾಸಿಗಳಾದ ಗಾರ್ ನಿಬಂದ್, ಮಂಜುನಾಥ ಆಗಸಿ, ರಫೀಕ್ ಹಕ್ಕಿ, ಮುಜಾಮಿಲ ಮುಗುಟಖಾನ್, ವಿನಾಯಕ ಮುರಗೋಡ, ಸಂತೋಷ ಹಾವನೂರ, ಸುಭಾನಿ ಸಂಗೊಳ್ಳಿ, ಲಕ್ಷ್ಮಣ ಕಳಂಕರ, ಸಾಧಿಕ್ ಸಂಗೊಳ್ಳಿ, ಕೃಷ್ಣಾ ನಾಯ್ಕರ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts