More

    ಅನ್ನ ನೀಡುವ ಅಕ್ಷಯ ಪಾತ್ರೆ ಕನ್ನಡ ಭಾಷೆ

    ನರಗುಂದ: ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಅನ್ನ ನೀಡುವ ಅಕ್ಷಯ ಪಾತ್ರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪ್ರವೀಣ ಮೇಟಿ ಹೇಳಿದರು.

    ತಾಲೂಕಿನ ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡೋತ್ಸವ-2020 ಉಪನ್ಯಾಸ ಮಾಲೆ ಹಾಗೂ ಭುವನೇಶ್ವರಿ ದೇವಿಯ ಪಂಚಲೋಹದ ಮೂರ್ತಿ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ‘ಕರೊನಾ ಜೀವ ಮತ್ತು ಜೀವನದ ಜತೆಗೆ ಚೆಲ್ಲಾಟವಾಡುತ್ತಿದೆ. ಪ್ರತಿಯೊಬ್ಬರೂ ಮುಖಗವಸು ಹಾಕಿಕೊಂಡು ಪರಸ್ಪರ ಅಂತರದೊಂದಿಗೆ ದೈನಂದಿನ ಕಾರ್ಯ ಮಾಡಬೇಕು ಎಂದರು.

    ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಂತಲಿಂಗ ಶ್ರೀಗಳು, ಆನ್​ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಕುಸಿಯುತ್ತಿದೆ. ಕರೊನಾ ರಾಜ್ಯೋತ್ಸವಕ್ಕೂ ಅಡ್ಡಗಾಲು ಹಾಕಿ ಕೋಟ್ಯಂತರ ಕನ್ನಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆಧ್ಯಾತ್ಮಿಕ, ಸಾಹಿತ್ಯಿಕ , ಸಾಂಸ್ಕೃತಿಕ ಚಟುವಟಿಕೆ ಮೇಲೆಯೂ ಅತೀವ ಪರಿಣಾಮ ಬೀರಿದೆ ಎಂದರು.

    ಉಪನ್ಯಾಸಕ ಪ್ರಭಾಕರ ಉಳ್ಳಾಗಡ್ಡಿ ಉಪನ್ಯಾಸ ನೀಡಿದರು. ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ರಾಷ್ಟ್ರ ದ್ವಜಾರೋಹಣ ನೆರವೇರಿಸಿದರು. ಕಸಾಪ ತಾಲೂಕು ಅಧ್ಯಕ್ಷೆ ಮಂಗಳಾ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ ಮಾತನಾಡಿದರು. ಡಾ. ಪ್ರವೀಣ ಮೇಟಿ, ಮಂಜು ಮೆಣಸಗಿ ಅವರನ್ನು ಸತ್ಕರಿಸಲಾಯಿತು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ನಿವೃತ್ತ ಶಿಕ್ಷಕ ವಿ.ಕೆ. ಮರೆಗುದ್ದಿ, ಪ್ರೊ. ಪಿ.ಎಸ್. ಅಣ್ಣಿಗೇರಿ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಪುರಸಭೆ ಸದಸ್ಯ ಚಂದ್ರಗೌಡ ಪಾಟೀಲ, ರಾಚನಗೌಡ, ಬಸವರಾಜ ತಾವರೆ, ಮುತ್ತಣ್ಣ ತಿರ್ಲಾಪೂರ, ಶಂಕರಗೌಡ ಶಿರಿಯಪ್ಪಗೌಡ್ರ, ಸೋಮು ಹೊಂಗಲ್, ಕೆ.ಟಿ. ಪಾಟೀಲ, ಅಜ್ಜುಗೌಡ ಪಾಟೀಲ, ಶಿವಾನಂದ ಬನಹಟ್ಟಿ ಇದ್ದರು. ಆರ್.ಬಿ. ಚಿನಿವಾಲರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts