More

    ಅನ್ನ ನೀಡಿದ ಕೈ ಚಾಚಬೇಕಾದಾಗ

    ಕಲಬುರಗಿ: ಕರೊನಾ ಲಾಕ್ಡೌನ್ನಿಂದಾಗಿ ಹೋಟೆಲ್ ಉದ್ಯಮಿಗಳು, ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಹೋಟೆಲ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿಪಾಲಾಗುವ ಸ್ಥಿತಿಗೆ ಬಂದಿದ್ದಾರೆ. ಎರಡ್ಮೂರು ತಿಂಗಳಿಂದ ಹೋಟೆಲ್ ವಹಿವಾಟಿಗೆ ಬ್ರೇಕ್ ಬಿದ್ದಿದ್ದರಿಂದ ಅನ್ನ ನೀಡುತ್ತಿದ್ದ ಕೈ ಇದೀಗ ಇನ್ನೊಬ್ಬರ ಬಳಿ ಕೈ ಚಾಚುವ ಸರದಿ ಬಂದಿದೆ.
    ಕಲಬುರಗಿ ಮಹಾನಗರದಲ್ಲಿ ಸುಮಾರು 450 ಹೋಟೆಲ್ಗಳಿದ್ದು, ಸಾವಿರಾರು ಕಾಮರ್ಿಕರು ಕೆಲಸ ಮಾಡುತ್ತಿದ್ದಾರೆ. ಇದೀಗ ಊಟ ಸಿಗುವುದೇ ದುಸ್ತರವಾಗಿದ್ದು, ಕಾರ್ಮಿಕರಿಗೆ ವೇತನ ನೀಡುವುದು ಹೋಟೆಲ್ ಮಾಲೀಕರಿಗೆ ಕಷ್ಟಸಾಧ್ಯ. ಆದರೂ ತಿಂಡಿ, ಊಟ, ವಸತಿ ಸೌಲಭ್ಯ ನೀಡಿ ಉಳಿಸಿಕೊಂಡಿದ್ದಾರೆ.
    ಮಹಾನಗರದ ಹೋಟೆಲ್ಗಳ ತಿಂಗಳ ವಹಿವಾಟು 25-30 ಕೋಟಿ ರೂ.ಗೆ ಖೋತಾ ಬಿದ್ದಿದೆ. ಹೋಟೆಲ್ ಬಾಡಿಗೆ, ಕಾರ್ಮಿಕರ ವೇತನ, ವಿದ್ಯುತ್ ಬಿಲ್ ಸೇರಿ ಈ ಎಲ್ಲ ಖರ್ಚು ಮಾಲೀಕರಿಗೆ ಭಾರ ಎನಿಸಿದೆ. ಕರೊನಾ ಮಹಾಮಾರಿಯಿಂದ ಹೋಟೆಲ್ಗಳು ಬಂದ್ ಆಗಿ ಸಂಕಷ್ಟದಲ್ಲಿರುವ ಮಾಲೀಕರಿಗೆ ಸರ್ಕಾರ ಸ್ಪಂದಿಸಬೇಕಿದೆ. ಹೋಟೆಲ್ ಕಾರ್ಮಿಕರಿಗೆ ಕನಿಷ್ಠ ಮೂರು ತಿಂಗಳು ವೇತನ ರೂಪದಲ್ಲಿ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕಿದೆ.
    ಹೋಟೆಲ್ಗಳು ಪುನರಾರಂಭಕ್ಕೆ ಜಿಲ್ಲಾಡಳಿತ ಮೊನ್ನೆ ತಾನೆ ಗ್ರೀನ್ ಸಿಗ್ನಲ್ ನೀಡಿತ್ತು. ಹೋಟೆಲ್ಗಳು ಓಪನ್ ಆಗಿ ಸ್ವಚ್ಛತಾ ಕಾರ್ಯ, ತಿಂಡಿ ಸಿದ್ಧತೆ ಮಾಡಿಕೊಂಡು ಮರುದಿನ ಬೆಳಗ್ಗೆ ಶುರು ಮಾಡುತ್ತಲೇ ಬಂದ್ ಆದೇಶ ಹೊರಬಿತ್ತು. ಇಂತಹ ತರಾತುರಿ ನಿರ್ಣಯದಿಂದಾಗಿ ಮಾಡಿದ ತಿಂಡಿ ಹಾಳಾಗಿ ಬೀದಿಗೆ ಚೆಲ್ಲಬೇಕಾಯಿತು. ಈ ಹಾನಿ ಭರಿಸುವವರು ಯಾರು? ಲಾಕ್ಔಟ್ನಿಂದ ಮೊದಲೇ ಹಾನಿ ಎದುರಿಸುತ್ತಿರುವ ಹೋಟೆಲ್ ಉದ್ಯಮಿಗಳಿಗೆ ಇದು ಹೆಚ್ಚುವರಿ ಬರೆ.

    ಸರ್ಕಾರದ ಸ್ಪಂದನೆ ಇಲ್ಲ
    ಸಂಕಷ್ಟದಲ್ಲಿರುವ ಹೋಟೆಲ್ ಮಾಲೀಕರಿಗೆ ಸರ್ಕಾರ ಸ್ಪಂದಿಸುವುದರ ಜತೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮೂರು ತಿಂಗಳ ವೇತನ ಪರಿಹಾರ ರೂಪದಲ್ಲಿ ನೀಡಬೇಕು. ಹೋಟೆಲ್ ಬಾಡಿಗೆ, ವಿದ್ಯುತ್ ಬಿಲ್ ಪಾವತಿ ಮೂರು ತಿಂಗಳು ಮುಂದೂಡಬೇಕು ಎಂದು ಸಂಬಂಧಿತ ಸಚಿವರಿಗೆ ಕೋರಿದ್ದರೂ ಸ್ಪಂದಿಸಿಲ್ಲ. ಹೋಟೆಲ್ ಬಂದ್ ಆಗಿದ್ದರಿಂದ ಸಕರ್ಾರಕ್ಕೆ ಬರಬೇಕಿದ್ದ ಜಿಎಸ್ಟಿ ಆದಾಯವೂ ನಿಂತಿದೆ.

    ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರು, ರೈತರು ಸೇರಿ ಅನೇಕ ಹಂತದ ಜನರಿಗೆ ಸರ್ಕಾರ ಆರ್ಥಿಕ ನೆರವು ಘೋಷಿಸಿದೆ. ಆದರೆ ಸಂಕಷ್ಟದಲ್ಲಿರುವ ಹೋಟೆಲ್ ಮಾಲೀಕರು, ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಾರ್ಮಿಕರಿಗೆ ವೇತನ ರೂಪದ ಪರಿಹಾರ ನೀಡಬೇಕು.
    | ಪ್ರವೀಣ್ ಜತನ್
    ಉಪಾಧ್ಯಕ್ಷ, ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ ಕಲಬುರಗಿ

    ಸುಮಾರು ಎರಡು ತಿಂಗಳಿಂದ ಹೋಟೆಲ್ ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್ ಆಗಿದೆ. ಹೋಟೆಲ್ ಬಾಡಿಗೆ, ಲೈಟ್ ಬಿಲ್ ಭರಿಸಲಾಗದ ಸ್ಥಿತಿಯಲ್ಲಿದ್ದೇವೆ. ಆದರೆ ಕಾರ್ಮಿಕರಿಗೆ ತಿಂಡಿ, ಊಟ ನೀಡಲಾಗುತ್ತಿದೆ. ಸರ್ಕಾರ ಆರ್ಥಿಕ ನೆರವು ಘೋಷಿಸಬೇಕು.
    | ನರಸಿಂಹ ಮೆಂಡನ್
    ಕಾರ್ಯದರ್ಶಿ , ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts