More

    ಅನ್ನಪ್ರಸಾದಕ್ಕೆ 5 ಕ್ವಿಂಟಾಲ್ ಬುಂದೆ ರವಾನೆ

    ಕೊಲ್ಹಾರ: ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು ಅಧ್ಯಾತ್ಮದ ಒಲುವಿನ ಜತೆಗೆ ಜ್ಞಾನದ ಬುತ್ತಿಯನ್ನು ದೇಶ- ವಿದೇಶದ ಪ್ರಜೆಗಳಿಗೆ ಉಣಬಡಿಸಿದ ಆಧುನಿಕ ಜಗದ ಸಂತರಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

    ಜ.1 ಹಾಗೂ 2 ರಂದು ನಡೆಯುತ್ತಿರುವ ಗುರು ನುಡಿನಮನ ಕಾರ್ಯಕ್ರಮದ ಅಂಗವಾಗಿ ಕೊಲ್ಹಾರ ರೈತರು 5 ಕ್ವಿಂಟಾಲ್ ಬುಂದೆಯನ್ನು ಅನ್ನಪ್ರಸಾದ ವ್ಯವಸ್ಥೆಗಾಗಿ ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಕಳಿಸಿಕೊಡುವ ಕಾರ್ಯಕ್ಕೆ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಮುಂದೆ ಚಾಲನೆ ನೀಡಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಶ್ರೀಗಳ ನುಡಿನಮನ ಕಾರ್ಯಕ್ರಮ ರಾಜ್ಯಾದ್ಯಂತ ಆಚರಣೆಯಾಗುವ ಜತೆಗೆ ಜನರಿಗೆ ಅವರು ಹೇಳಿರುವ ಪ್ರವಚನಗಳ ಜ್ಞಾನಗಂಗೆಯ ವಿಡಿಯೋ ಧ್ವನಿಸುರುಳಿಗಳನ್ನು ಪ್ರತಿಯೊಬ್ಬರೂ ಆಲಿಸುವಂತಾಗಲು ಹಾಗೂ ಪಠ್ಯಪುಸ್ತಕಗಳಲ್ಲಿಯೂ ಕೂಡ ಸಿದ್ಧೇಶ್ವರ ಸ್ವಾಮಿಗಳ ಜೀವನ ಚರಿತ್ರೆ ಪಾಠ ಬೋಧನೆಯಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೆಳ್ಳುಬ್ಬಿ ಹೇಳಿದರು.

    ಅರಮನೆಯಂತಹ ಮನೆಗೆ ಆಸೆ ಪಡದೆ ದುಡ್ಡಿನ ವ್ಯಾಮೋಹದಿಂದ ದೂರ ಸರಿದು ಆಸೆಯೆಂಬ ಅಭಿಲಾಷೆ ವ್ಯಕ್ತಪಡಿಸದೆ ತಮ್ಮದೇ ಆದ ತತ್ವ ರೂಢಿಸಿಕೊಂಡು ಸಮಾಜದಲ್ಲಿ ಮಾನವರು ಯಾವ ರೀತಿ ಬದುಕಬೇಕೆಂಬ ಜೀವನ ಪಾಠವನ್ನು ತಾವುಗಳು ಆಚರಿಸಿ ಜನರು ಇದೇ ರೀತಿ ಬದುಕಬೇಕು ಎಂದು ತೋರಿಸಿದ ಮಹಾನ್ ತಪಸ್ಸಿನ ಸಂತ ಶ್ರೇಷ್ಠರಲ್ಲಿ ಸಿದ್ಧೇಶ್ವರ ಶ್ರೀಗಳು ಒಬ್ಬರು ಎಂದರು.

    ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಹಿರೇಮಠದ ಮುರುಘೇಂದ್ರ ಸ್ವಾಮಿಗಳು, ಈರಯ್ಯ ಮಠಪತಿ ಹಾಗೂ ಪಟ್ಟಣದ ರೈತರು, ಸಮಸ್ತ ಜನತೆ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts