More

    ಅನ್ನ ಪ್ರಸಾದಕ್ಕೆ ಮುಳವಾಡ, ರೋಣಿಹಾಳ ಭಕ್ತರ ಸೇವೆ

    ಕೊಲ್ಹಾರ: ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲು ತಾಲೂಕಿನ ಮುಳವಾಡ ಹಾಗೂ ರೋಣಿಹಾಳ ಗ್ರಾಮಗಳ ಭಕ್ತರು ಪ್ರಸಾದಕ್ಕಾಗಿ ಸಿದ್ಧಪಡಿಸಿದ ಘನ ಆಹಾರವನ್ನು ಶನಿವಾರ ಅರ್ಪಿಸಿದರು.

    ತಾಲೂಕಿನ ಮುಳವಾಡ ಹನುಮಾನ ದೇವಸ್ಥಾನದಲ್ಲಿ ಎರಡು ದಿನ ಅಡುಗೆ ಭಟ್ಟರಾದ ಶಂಕರಗೌಡ ಬಿರಾದಾರ- ಸಂಗಡಿಗರು ತಯಾರಿಸಿದ್ದ 9 ಕ್ವಿಂಟಾಲ್ ಸುರಮಾ ಮಾದಲಿ ಹಾಗೂ 5 ಕ್ವಿಂಟಾಲ್ ಅಕ್ಕಿ ಹಾಗೂ ಭಕ್ತರು ನಗದು ರೂಪದಲ್ಲಿ ನೀಡಿದ ಒಂದು ಲಕ್ಷ ರೂಪಾಯಿಗಳನ್ನು ಜ್ಞಾನಯೋಗಾಶ್ರಮಕ್ಕೆ ಸಲ್ಲಿಸಿದರು.

    ಅದರಂತೆ ಕೊಲ್ಹಾರ ಸಮೀಪದ ರೋಣಿಹಾಳ ಗ್ರಾಮಸ್ಥರು ಕೂಡ ಮನೆ ಮನೆಯಲ್ಲಿ ತಯಾರು ಮಾಡಿದ ಒಂದು ಮನೆಗೆ ಹನ್ನೊಂದರಂತೆ ಅಂದಾಜು 11 ಸಾವಿರ ಶೇಂಗಾ ಹೋಳಿಗೆಯನ್ನು ಕಾರ್ಯಕ್ರಮ ನಡೆಯುವ ಜ್ಞಾನಯೋಗಾಶ್ರಮದ ಅನ್ನದಾಸೋಹ ಮಂಟಪಕ್ಕೆ ತೆರಳಿ ಸಲ್ಲಿಸಿ ಬಂದರು.

    ರೋಣಿಹಾಳ ಗ್ರಾಮದ ಹಿರಿಯರಾದ ಮಲ್ಲು ದೇಸಾಯಿ, ಓಂಕಾರೆಪ್ಪಗೌಡ ಪಾಟೀಲ, ಬಾಳು ಗಾಯಕವಾಡ ಹಾಗೂ ಮುಳವಾಡ ಗ್ರಾಮದ ಹಿರಿಯರಾದ ಗ್ರಾಪಂ ಅಧ್ಯಕ್ಷ ಹನುಮಂತ ಕಳಸಗೊಂಡ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ತುಪ್ಪದ, ಅನ್ನುಗೌಡ ಬಿರಾದಾರ, ಸಂಗನಗೌಡ ಪಾಟೀಲ, ಮುತ್ತು ಕಳಸಗೊಂಡ, ರವಿ ಕೆಂಗನಾಳ, ಚನ್ನಪ್ಪಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts