More

    ಅನ್ನದಾತ ಸುಭಿಕ್ಷನಾದರೆ ದೇಶ ಶ್ರೀಮಂತವಾದಂತೆ

    ಕುಮಟಾ: ರೈತ ಸುಭಿಕ್ಷನಾದರೆ ಮಾತ್ರ ದೇಶ ಶ್ರೀಮಂತವಾಗುತ್ತದೆ. ರೈತರು ಆತ್ಮನಿರ್ಭರವಾದರೆ ದೇಶ ಸ್ವಾವಲಂಬನೆಯಲ್ಲಿ ಜಗತ್ತನ್ನೇ ಗೆಲ್ಲಬಹುದು ಎಂದು ಕಾರವಾರ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ಎಂ. ಪಿಂಜಾರ ಹೇಳಿದರು.

    ಪಟ್ಟಣದ ವೈಭವ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಎಸ್​ಬಿಐ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ರೈತರ ಹಿತಕ್ಕಾಗಿಯೇ ಪ್ರಧಾನಿ ಮೋದಿಯವರು ಆತ್ಮನಿರ್ಭರದಡಿ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಇದನ್ನು ಗ್ರಾಮೀಣ ಭಾಗದ ರೈತರು ತಿಳಿದುಕೊಂಡು ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕೃಷಿ ನಿರ್ದೇಶಕರಾದ ರಶ್ಮಿ ಶಹಾಪುರಮಠ ಮಾತನಾಡಿ, ದೇಶದ ಯುವ ಪೀಳಿಗೆ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕೃಷಿಯನ್ನು ಲಾಭದಾಯಕ ಮತ್ತು ವಿಶ್ವಾಸಾರ್ಹ ವ್ಯವಸಾಯವಾಗಿ ಬದಲಾಯಿಸಿಕೊಳ್ಳಬೇಕು ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಮಾತನಾಡಿದರು. ಎಸ್​ಬಿಐ ಕಾರವಾರದ ಮುಖ್ಯ ಪ್ರಬಂಧಕ ಎಂ.ಬಿ. ರಾಮಕುಮಾರ್ ಕೊಡ್ಲೆಕೆರೆ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಆರ್​ಸೆಟಿ ನಿರ್ದೇಶಕ ಜಿ.ಕೆ. ರವಿ, ಭಟ್ಕಳದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದಯಾನಂದ ಗುಂಡು ಇದ್ದರು. ಗೌರೀಶ ನಾಯ್ಕ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ನಾಯ್ಕ ನಿರ್ವಹಿಸಿದರು.

    ರೈತರಿಗೆ ಸನ್ಮಾನ
    ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ರೈತರಾದ ಸಂಧ್ಯಾ ಭಟ್ಟ ಕೂಜಳ್ಳಿ, ವೆಂಕಟ್ರಮಣ ಭಟ್ಟ ಕೂಜಳ್ಳಿ, ಅಣ್ಣಪ್ಪ ಗೌಡ ಬಡಾಳ, ಜಾನಕಿ ನಾಯ್ಕ ಹೊಲನಗದ್ದೆ, ಪ್ರಶಾಂತ ಜಿ. ನಾಯ್ಕ ಅಘನಾಶಿನಿ, ಸಾವಿತ್ರಿ ಗಣಪತಿ ಹೆಗಡೆ ಹೊಲನಗದ್ದೆ ಅವರನ್ನು ಗೌರವಿಸಲಾಯಿತು. ಸ್ವ- ಸಹಾಯ ಸಂಘಗಳಿಗೆ ಪೋ›ತ್ಸಾಹಧನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts