More

    ಅನ್ನದಾತರ ಸಂಕಷ್ಟಕ್ಕೆ ಸಂದಿಸಿ

    ಜೇವರ್ಗಿ: ಧಾರಾಕಾರ ಮಳೆಯಿಂದ ಬಹುತೇಕ ವಾಣಿಜ್ಯ ಬೆಳೆಗಳು ಹಾಳಾಗಿದ್ದು, ಭೀಮೆಯ ಪ್ರವಾಹದಿಂದ ಸಾಕಷ್ಟು ರೈತರ ಜಮೀನುಗಳು ಜಲಾವೃತವಾಗಿವೆ. ರೈತಾಪಿ ವರ್ಗಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆಯ ನೆಲೋಗಿ ವಲಯ ಘಟಕದಿಂದ ಜೇರಟಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
    ವಲಯ ಘಟಕದ ಅಧ್ಯಕ್ಷ ಯಲ್ಲಪ್ಪ ಬಂಕಲಗಿ ಮಾತನಾಡಿ, ಮಳೆಯಿಂದ ಬೆಳೆ ಹಾಳಾದರೆ, ಪ್ರವಾಹದಿಂದ ಫಲವತ್ತಾದ ಭೂಮಿ ಕೊಚ್ಚಿ ಹೋಗಿದೆ. ಇದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿ ಸಿಲುಕಿದೆ. ಈ ಹಿಂದೆ ಕರೊನಾದಿಂದ ರೈತರು ಬೆಳೆದ ಫಸಲಿಗೆ ಸಮರ್ಪಕ ಬೆಲೆ ಸಿಗಲಿಲ್ಲ. ಇದೀಗ ಮಳೆ, ಪ್ರವಾಹದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಿಡಿಕಾರಿದರು.
    ರೈತರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕರೊನಾ ವಾರಿಯಸರ್್ಗಳಾಗಿ ಹಗಲಿರುಳು ಶ್ರಮವಹಿಸಿ, ಜನರಲ್ಲಿ ಜಾಗೃತಿ ಮೂಡಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕತರ್ೆಯರಿಗೆ ದಿನಗೂಲಿಯಂತೆ ತಿಂಗಳಿಗೆ 12 ಸಾವಿರ ರೂ. ನೀಡಬೇಕು. ಅಂಕಲಗಾದಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ವಸತಿ ನಿಲಯ ಸ್ಥಾಪನೆ ಮಾಡಬೇಕು. ನೆಲೋಗಿ ರೈತ ಸಂಪರ್ಕ ಕೇಂದ್ರದಲ್ಲಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಜೇವಗರ್ಿಯಲ್ಲಿ ಪತ್ರಿಕಾ ಭವನ ನಿಮರ್ಿಸಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಿದರಾಯ ಭೋಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಗೋರಗುಂಡಗಿಯ ಶ್ರೀ ವರಲಿಂಗೇಶ್ವರ ಸ್ವಾಮೀಜಿ, ಕರವೇ ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ, ಪ್ರಮುಖರಾದ ಗುರುಪ್ರಸಾದ ಹುಲ್ಲೂರ, ಮಲ್ಲಿಕಾಜರ್ುನ ಬಿರಾದಾರ, ಸುರೇಶ ಬೇಲೂರ, ಶರಣಪ್ಪ ಜೇರಟಗಿ, ರಾಜು ಮುದ್ದಾ, ಪ್ರಭಾಕರ ಬಂಡಗಾರ, ಮಹೇಶ ಕೂಡಲಗಿ, ರಫೀಕ್ ಜೇರಟಗಿ, ರಮೇಶ ಯಾತನೂರ, ಚಿದಾನಂದ ಇಟಗಾ ಇದ್ದರು.

    ಸುಗಮ ಸಂಚಾರಕ್ಕೆ ತೊಂದರೆ
    ಕರವೇ ಕಾರ್ಯಕರ್ತರಿಂದ ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಸುಗಮ ಸಂಚಾರಕ್ಕೆ ಕೆಲ ಸಮಸ್ಯೆ ಆಯಿತು. ರಸ್ತೆಯ ಎರಡು ಬದಿಯಲ್ಲಿ ಹೆಚ್ಚಿನ ವಾಹನಗಳು ಸಾಲಾಗಿ ನಿಂತಿದ್ದವು. ಪೊಲೀಸರು ಸ್ಥಳದಲ್ಲಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ತಹಸೀಲ್ದಾರ್ ಅವರು ಸ್ಥಳಕ್ಕಾಗಮಿಸಿ, ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts