More

    ಅನೈತಿಕ ತಾಣವಾದ ಅಂಬೇಡ್ಕರ್ ಭವನ

    ಮುಂಡಗೋಡ: ಪಟ್ಟಣದ ಗಾಂಧಿ ನಗರದಲ್ಲಿರುವ ಡಾ. ಅಂಬೇಡ್ಕರ್ ಭವನ ನಿರ್ವಹಣೆ ಕೊರತೆಯಿಂದ ಪುಂಡ-ಪೋಕರಿಗಳ ಅಡ್ಡೆಯಾಗಿದೆ.
    2001ರಲ್ಲಿ ಸಮಾಜ ಕಲ್ಯಾಣ ಇಲಾಖೆಯ 3 ಲಕ್ಷ ರೂ. ಅನುದಾನದಲ್ಲಿ ನಿರ್ವಿುಸಲಾದ ಈ ಕಟ್ಟಡದಲ್ಲಿ ಒಂದು ಸಭಾಭವನ ಮತ್ತು ಎರಡು ಕೊಠಡಿಗಳಿವೆ. ಸಭಾಭವನದ ಸುತ್ತಲೂ ಕಾಂಪೌಡ್ ಹಾಗೂ ಗೇಟ್ ಇದೆ. ಸದ್ಯಕ್ಕೆ ಗೇಟ್​ಗೆ ಬೀಗ ಹಾಕಿಲ್ಲ. ಬೀಗ ಹಾಕಿದರೂ ಕಾಂಪೌಡ್ ಜಿಗಿದು ಒಳಗೆ ಬರುವ ಪುಂಡರು ಸಭಾಭವನ ಹಾಗೂ ಕೊಠಡಿಗಳಿಗೆ ನುಗ್ಗಿ ಎಲೆ, ಅಡಕೆ, ಗುಟ್ಖಾ ತಿಂದು ಉಗುಳುವುದು, ಬೀಡಿ, ಸಿಗರೆಟ್ ಸೇದಿ ಖಾಲಿ ಪಾಕೆಟ್​ಗಳನ್ನು ಎಸೆಯುವುದು, ಜೂಜಾಡುವುದು ಹಾಗೂ ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ.
    ಸಂವಿಧಾನ ಶಿಲ್ಪಿಯ ಹೆಸರಲ್ಲಿ ಭವನ ನಿರ್ವಿುಸಲಾಗಿದೆ. ಆದರೆ, ಆ ಹೆಸರಿಗೆ ಗೌರವ ಕೊಡುವ ರೀತಿಯಲ್ಲಿ ಅಧಿಕಾರಿಗಳು ನಿರ್ವಹಣೆ ಮಾಡುತ್ತಿಲ್ಲ. ಇನ್ನು ಮುಂದಾದರೂ ಇಂತಹ ಗಲೀಜು ಕೆಲಸ ಮಾಡುತ್ತಿರುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿ ನಗರದ ನಿವಾಸಿಗಳಾದ ಸುರೇಶ ಚಲವಾದಿ, ರಾಜು ಬಾಬರ, ರಾಮು ಕೊರವರ, ಲಿಂಗರಾಜ ಗದಗ, ರಮೇಶ ಗುಡಗೇರಿ, ಶ್ರೀನಿವಾಸ ಹುಲಗೂರ ಆಗ್ರಹಿಸಿದ್ದಾರೆ.

    ಪಟ್ಟಣ ಪಂಚಾಯಿತಿಯವರು ನೀಡಿದ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಿಂದ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಪ.ಪಂ.ಗೆ ಹಸ್ತಾಂತರಿಸಲಾಗಿದೆ. ಪಟ್ಟಣ ಪಂಚಾಯಿತಿಯವರೇ ಅಂಬೇಡ್ಕರ್ ಭವನದ ನಿರ್ವಹಣೆ ಮಾಡುತ್ತಿದ್ದಾರೆ. ಹೊರಗೆ ಬೀಗ ಹಾಕಿಸುವ ವ್ಯವಸ್ಥೆ ಮತ್ತು ಬೀಟ್ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆಗೆ ಪತ್ರ ಬರೆಯಲು ಮುಖ್ಯಾಧಿಕಾರಿಗೆ ಈಗಾಗಲೆ ತಿಳಿಸಿದ್ದೇನೆ. ಬಂದೋಬಸ್ತ್ ಮಾಡಿದರೆ ಯುವಕರ ಉಪಟಳ ತಾನಾಗಿಯೇ ಕಡಿಮೆಯಾಗುತ್ತದೆ.
    | ಗೋಪಾಲಕೃಷ್ಣ ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮುಂಡಗೋಡ

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಅಂಬೇಡ್ಕರ್ ಭವನದಲ್ಲಿ ಆಗುತ್ತಿರುವ ಗಲೀಜಿನ ಬಗ್ಗೆ ತಿಳಿಸಿದ್ದಾರೆ. ಗೇಟ್​ಗೆ ಬೀಗ ಹಾಕಿದರೆ ಬೀಗವನ್ನೇ ಮುರಿಯುತ್ತಾರೆ. ಇಲ್ಲವಾದರೆ ಕಾಂಪೌಂಡ್ ಹಾರಿ ಒಳಗೆ ನುಗ್ಗುತ್ತಾರೆ. ರಾತ್ರಿ ವೇಳೆ ಬೀಟ್ ಪೊಲೀಸರನ್ನು ನೇಮಿಸಲು ಪಿಎಸ್​ಐ ಮತ್ತು ಸಿಪಿಐ ಇಬ್ಬರಿಗೂ ಫೋನ್ ಮಾಡಿ ತಿಳಿಸಿದ್ದೇನೆ. ಇನ್ನೊಂದು ಭದ್ರವಾದ ಬೀಗವನ್ನೂ ಹಾಕಿಸುವ ವ್ಯವಸ್ಥೆ ಮಾಡುತ್ತೇನೆ.
    | ಸಂಗನಬಸಯ್ಯ, ಪ.ಪಂ. ಮುಖ್ಯಾಧಿಕಾರಿ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts