More

    ಅನುದಾನ ಬಿಡುಗಡೆಯ ದಾಖಲೆ ಒದಗಿಸಿ

    ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ 200 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸುತ್ತಿರುವುದಾಗಿ ಶಾಸಕ ಸಿ.ಎಸ್.ನಾಡಗೌಡರು ಹೇಳಿದ್ದಾರೆ. ಆದರೆ ಈಗಿನ ಸರ್ಕಾರದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೊಸ ಕಾಮಗಾರಿ ಅನುಮೋದನೆಗೊಂಡಿದ್ದರೆ ದಾಖಲೆಗಳನ್ನು ಜನರ ಎದುರಿಗಿಡಬೇಕು. ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸವಾಲೆಸೆದರು.

    ಬಿಜೆಪಿ ಮುಖಂಡರೊಂದಿಗಿನ ಸುದ್ದಿಗೋಷ್ಠಿಯಲ್ಲಿ ಭಾನುವಾರ ಅವರು ಮಾತನಾಡಿ, ನನ್ನ ಶಾಸಕತ್ವದಲ್ಲಿನ ಕೆಲಸಗಳೇ ಈಗಲೂ ಮುಂದುವರಿದಿವೆ. ಅವುಗಳಿಗೂ ಶಾಸಕರ ಕೆಲ ಬೆಂಬಲಿಗರು ಅಡ್ಡಿ ಮಾಡುತ್ತಿದ್ದಾರೆ. ಜನರಿಗೆ ಸುಳ್ಳು ಮಾಹಿತಿ ನೀಡಿ ಏಮಾರಿಸಬಾರದು. 200 ಕೋಟಿ ರೂ. ವಿವರಗಳನ್ನು ಧೈರ್ಯವಾಗಿ ಮಾಧ್ಯಮಕ್ಕೆ ಬಿಡುಗಡೆಗೊಳಿಸಬೇಕು ಎಂದರು.

    ಮುಖ್ಯಮಂತ್ರಿಗೆ ಪೌರಸನ್ಮಾನದ ಔಚಿತ್ಯ ಪ್ರಶ್ನಿಸಿದ ನಡಹಳ್ಳಿಯವರು, ಮುಖ್ಯಮಂತ್ರಿಗೆ ಗೌರವ ಕೊಡುವುದನ್ನು ತಪ್ಪೆನ್ನುತ್ತಿಲ್ಲ. ಆದರೆ ಅವರ ಕೊಡುಗೆ ಮತಕ್ಷೇತ್ರಕ್ಕೆನಿದೆ ಅನ್ನೋದನ್ನು ತಿಳಿಸಿಕೊಟ್ಟು ಸನ್ಮಾನಿಸಿದರೆ ಜನತೆಗೆ ಖುಷಿಯಾಗುತ್ತದೆ. ರಾಜಕಾರಣಕ್ಕೋಸ್ಕರ ಸನ್ಮಾನಿಸುವುದಕ್ಕೆ ವಿರೋಧವಿದೆ ಎಂದರು.

    ಮುದ್ದೇಬಿಹಾಳ ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಎಂ.ಎಸ್.ಪಾಟೀಲ, ಬಿ.ಪಿ.ಕುಲಕರ್ಣಿ, ಪ್ರಭು ಕಡಿ, ಗಿರೀಶಗೌಡ ಪಾಟೀಲ, ಅಶೋಕ ರಾಠೋಡ, ಮಂಜುನಾಥ ಚಲವಾದಿ, ಗುರುಧಣಿ ದೇಶಮುಖ, ಶ್ರೀಶೈಲ ದೊಡಮನಿ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಸದಾಶಿವ ಮಾಗಿ, ವಾಸುದೇವ ಹೆಬಸೂರ, ಮುದಕಣ್ಣ ಬಡಿಗೇರ, ಅಶೋಕ ವನಹಳ್ಳಿ, ಮಾಣಿಕ ಹಿರಟ್ಟಿ, ಡಾ.ವೀರೇಶ ಪಾಟೀಲ, ಗೌರಮ್ಮ ಹುನಗುಂದ, ಎಂ.ಆರ್.ಪಾಟೀಲ, ಪ್ರೇಮಸಿಂಗ್ ಚವ್ಹಾಣ, ರಾಜು ಬಳ್ಳೊಳ್ಳಿ, ಶಿವಪ್ಪ ಚಿಮ್ಮಲಗಿ, ಮಹಾಂತೇಶ ಗಂಜ್ಯಾಳ, ಪರಶುರಾಮ ನಾಲತವಾಡ, ಲಕ್ಷ್ಮಣ ಬಿಜ್ಜೂರ, ಅಪ್ಪುಗೌಡ ಮೈಲೇಶ್ವರ, ರಾಜಶೇಖರ ಹೊಳಿ ಇತರರಿದ್ದರು.

    ಗೂಡಂಗಡಿ ಕಿತ್ತಿಸಿದ್ದಕ್ಕೆ ಆಕ್ಷೇಪ
    ತಹಸೀಲ್ದಾರ್ ಕಚೇರಿ ಆವರಣದಲ್ಲಿನ ಬಡವರ ಗೂಡಂಗಡಿ ಕಿತ್ತಿಸಿದ್ದನ್ನು ಆಕ್ಷೇಪಿಸಿದ ನಡಹಳ್ಳಿಯವರು ಕಾಂಗ್ರೆಸ್‌ನ ಮರಿಪುಡಾರಿಗಳು ಪುರಸಭೆ ಜಾಗ ಅತಿಕ್ರಮಿಸಿ ಇಟ್ಟಿರುವ ಶೆಡ್, ಅಂಗಡಿ ತೆರವಿಗೆ ಕೈಹಾಕದಿರುವುದನ್ನು ಟೀಕಿಸಿದರು. ಹಿಂದೊಮ್ಮೆ ಪುರಸಭೆ ಹತ್ತಿರ ಬೆಂಗಳೂರು ಬೇಕರಿ ಪಕ್ಕದ ರಸ್ತೆ ಅತಿಕ್ರಮಿಸಿ ಅಂಗಡಿ ಇಟ್ಟವನ ಪರ ಮಾತನಾಡಿ, ಪೊಲೀಸ್ ಠಾಣೆಗೆ ಬಂದಿದ್ದ ನಾಡಗೌಡರು ಧರಣಿ ಕುಳಿತುಕೊಳ್ಳುವುದಾಗಿ ಬೆದರಿಸಿದ್ದರು. ಈಗ ಯಾರ ಪರ ಧರಣಿ ಕೂಡುತ್ತೀರಿ ಎಂದು ವ್ಯಂಗ್ಯವಾಡಿ ಬಡವರ ಹೊಟ್ಟೆ ಮೇಲೆ ಹೊಡೆದಿರುವ ನೀವು ಎಲ್ಲರಿಗೂ ಸಮಾನ ನ್ಯಾಯ ಪಾಲಿಸಿ ಎಂದರು.
    ಕೆರೆಗಳಿಗೆ ನೀರು ತುಂಬಿಸಿ
    ಬರಗಾಲದಿಂದ ಒಣಗುತ್ತಿರುವ ಕೆರೆಗಳನ್ನು ಆಲಮಟ್ಟಿ ಡ್ಯಾಂನ ಚಿಮ್ಮಲಗಿ ಏತ ನೀರಾವರಿಯ ಪೂರ್ವ ಕಾಲುವೆಗಳಿಂದ ತುಂಬಿಸಲು ಶಾಸಕರು ಅಧಿಕಾರಿಗಳಿಗೆ ಒತ್ತಡ ಹಾಕಬೇಕು. ಇಲ್ಲವಾದಲ್ಲಿ ೆಬ್ರವರಿ ಮಧ್ಯಭಾಗದಲ್ಲಿ ರೈತರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ. ಕೆರೆಗಳು ಒಣಗುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಡ್ಯಾಂನಲ್ಲಿರುವ ನೀರಿನಲ್ಲಿ ಕೆರೆಗಳಿಗೆಂದೇ ವಿಶೇಷ ಹಂಚಿಕೆ ಮಾಡಲಾಗಿದ್ದನ್ನು ಬಳಸಿಕೊಂಡು ಪೂರ್ತಿ ತುಂಬಿಸಬೇಕು. ಕುರಿಗಾರರು, ಕುರಿಗಳಿಗೆ ನೀರು ಸಿಗದ ಪರಿಸ್ಥಿತಿ ಬಂದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರಿಗಾರರ ಶಾಪಕ್ಕೊಳಗಾಗಬೇಕಾಗುತ್ತದೆ. ನಾನು ಶಾಸಕನಾಗಿದ್ದಾಗ ಅಧಿಕಾರಿಗಳ ಬೆನ್ನುಹತ್ತಿ ಕೆರೆಗಳಿಗೆ ನೀರು ಬಿಡಿಸುತ್ತಿದ್ದೆ. ಮಾದಿನಾಳ, ಗೆದ್ದಲಮರಿ, ಸರೂರ, ಜಲಪೂರ, ಅಡವಿ ಹುಲಗಬಾಳ, ಹೊಕ್ರಾಣಿ, ಇಂಗಳಗೇರಿ, ಪಡೇಕನೂರ, ವನಹಳ್ಳಿ, ಬಳಗಾನೂರ, ತಮದಡ್ಡಿ, ಮಲಗಲದಿನ್ನಿ, ಅರಸನಾಳ ಕೆರೆಗಳಲ್ಲಿ ವರ್ಷದ 12 ತಿಂಗಳು ನೀರಿರುವಂತೆ ಮಾಡಿದ್ದರಿಂದ ಅಂತರ್ಜಲ ಹೆಚ್ಚಾಗಿ ರೈತರಿಗೆ ಪ್ರಯೋಜನವಾಗಿತ್ತು. ಈಗಿನ ಶಾಸಕರು ಇದನ್ನು ಮಾಡಬಹುದು ಎಂದು ನಡಹಳ್ಳಿಯವರು ತಿಳಿಸಿದರು.
    ತಾಲೂಕು ಕ್ರೀಡಾಂಗಣಕ್ಕೆ 2.86 ಕೋಟಿ ರೂ. ಅನುದಾನ ಕೊಡಿಸಿದ್ದು 10 ಕೋಟಿ ರೂ. ಅನುದಾನವನ್ನು ಖೇಲೋ ಇಂಡಿಯಾದಿಂದ ತರಿಸಲು ವ್ಯವಸ್ಥೆ ಮಾಡಿದ್ದೆ. ಸದ್ಯ ಕ್ರೀಡಾಂಗಣ ಕೆಲಸ ನನೆಗುದಿಗೆ ಬಿದ್ದಿದೆ. ಶಾಸಕರು ಮುಖ್ಯಮಂತ್ರಿಗೆ ಒತ್ತಡ ಹಾಕಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಕ್ರೀಡಾಂಗಣ ಪೂರ್ಣಗೊಳಿಸಬೇಕು.
    ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts