More

    ಅನಿಷ್ಠ ಪದ್ಧತಿ ಅಳಿಸಲು ಶ್ರಮಿಸಿ


    ಯಾದಗಿರಿ: ಬಾಲ್ಯ ವಿವಾಹ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಇದರ ಅಳಿಸಲು ಸಾಮಾಜಿಕ ಸಹಭಾಗಿತ್ವ ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್.ಹೊನೋಲೆ ತಿಳಿಸಿದರು.

    ನಗರದ ಧೋಖಾ ಜೈನ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಧೋಖಾ ಜೈನ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಕನರ್ಾಟಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅನಕ್ಷರತೆ ಹಾಗೂ ಬಡತನ ಇದಕ್ಕೆ ಕಾರಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಾಕ್ಷರರಾದಾಗ ಮೌಢ್ಯ ಆಚರಣೆಗಳನ್ನು ತಡೆಯಲು ಸಾಧ್ಯವಿದೆ ಎಂದರು.

    ಸಿವಿಲ್ ನ್ಯಾಯಾಧೀಶೆ ಅಸ್ಮಿನಾ ಮಾತನಾಡಿ, 18 ವರ್ಷದ ಒಳಗಿನ ಹೆಣ್ಣು ಮತ್ತು 21 ವರ್ಷದ ಒಳಗಿನ ಗಂಡಿನ ನಡುವೆ ನಡೆಯುವ ಮದುವೆಗೆ ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ದಂಪತಿಗಳಲ್ಲಿ ಯಾರಾದರೊಬ್ಬರು ನಿಗದಿತ ವಯಸ್ಸಿನ ಒಳಗಿನವರಾಗಿದ್ದರೂ ಅಪರಾಧವಾಗುತ್ತದೆ ಎಂದು ವಿವರಿಸಿದರು.

    ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಕಾನೂನಿನ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅನಿಷ್ಠ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

    ಪ್ರಾಂಶುಪಾಲೆ ದೀಪಿಕಾ ರೆಡ್ಡಿ, ಶಾಲೆಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗ ಇದ್ದರು. ಇದಕ್ಕೂ ಮುನ್ನ ವಿದ್ಯಾಥರ್ಿಗಳಿಂದ ಬಾಲ್ಯ ವಿವಾಹ ಪದ್ದತಿ ವಿರುದ್ಧ ಜಾಗೃತಿ ಜಾಥಾ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts