More

    ಅನಾಥ ವೃದ್ಧೆಗೆ ಜಿಲ್ಲಾಡಳಿತ ಆಶ್ರಯ

    ಮುಳಬಾಗಿಲು: ನಗರದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದ ಅನಾಥ ವೃದ್ಧೆ ಶಿವನಾಗಮ್ಮ(80) ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಜಿಲ್ಲಾಡಳಿತ ಮಾನವೀಯತೆ ಮೆರೆದಿದೆ.

    ಸಂಬಂಧಿಕರು ಯೋಗಕ್ಷೇಮ ನೋಡದ ಹಿನ್ನೆಲೆಯಲ್ಲಿ ಕಳೆದ 32 ವರ್ಷಗಳಿಂದ ನಗರದ ಜಹಂಗೀರ್ ಮೊಹಲ್ಲಾ ಮಸೀದಿ ಬಳಿ ರಸ್ತೆಯಲ್ಲೇ ಜೀವನ ನಡೆಸುತ್ತಿದ್ದ ವೃದ್ಧೆಯ ಸಂಕಷ್ಟದ ಬಗ್ಗೆ ‘ರಸ್ತೆ ಬದಿಯಲ್ಲೇ ವೃದ್ಧೆ ವಾಸ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಸೆ.24ರಂದು ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ನೆರವಿಗೆ ಧಾವಿಸಿದ್ದಾರೆ.

    ಜಿಲ್ಲಾಡಳಿತ, ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ವೃದ್ಧೆಯನ್ನು ಕೆಜಿಎಫ್ ನಗರದ ಪಾರಂಡಹಳ್ಳಿ ಸಮೀಪದ ರಮಣಮಹರ್ಷಿ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಿದ್ದಾರೆ.

    ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ: ವೃದ್ಧೆಯ ವ್ಯಥೆಯ ಬಗ್ಗೆ ವರದಿ ಪ್ರಕಟಗೊಂಡ ನಂತರ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ತಹಸೀಲ್ದಾರ್ ಕೆ.ಎನ್.ರಾಜಶೇಖರ್‌ಗೆ ಸೂಚನೆ ನೀಡಿ ವೃದ್ಧೆಗೆ ವಸತಿ ಸೌಲಭ್ಯ ಕಲ್ಪಿಸುವಂತೆ ತಿಳಿಸಿದ್ದರು.

    ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿ ಓದಿದ ತಕ್ಷಣ ದಿವ್ಯಜ್ಯೋತಿ, ಹಿರಿಯ ನಾಗರಿಕರ ಸಹಾಯವಾಣಿ ಕಾರ್ಯಕರ್ತರನ್ನು ಸ್ಥಳಕ್ಕೆ ಕಳುಹಿಸಿ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸಾಗಿಸಲು ವ್ಯವಸ್ಥೆ ವಾಡಲಾಗಿದೆ.
    ಬಿ.ಎಂ.ಮುನಿರಾಜು, ಹಿರಿಯ ನಾಗರಿಕರ ಮತ್ತು ಅಂಗವಿಕಲರ ಚೇತನ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಕೋಲಾರ

    ವೃದ್ಧೆ ತೊಂದರೆಗೆ ಒಳಗಾಗಿರುವುದು ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆದು, ವೃದ್ಧಾಶ್ರಮಕ್ಕೆ ದಾಖಲಿಸಲಾಯಿತು.
    ಕೆ.ಎನ್.ರಾಜಶೇಖರ್, ತಹಸೀಲ್ದಾರ್ ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts