More

    ಕಾಂಗ್ರೆಸ್​ ಮುಕ್ತ ಕೋಲಾರ ಜಿಲ್ಲೆಗೆ ಪಣ; ಸಂಸದ ಎಸ್​. ಮುನಿಸ್ವಾಮಿ ವಿಶ್ವಾಸ

    ಮುಳಬಾಗಿಲು: ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್​ ಮುಕ್ತವಾಗಿಸಲು ಬಿಜೆಪಿ ಮುಂದಾಗಿದೆ ಎಂದು ಸಂಸದ ಎಸ್​. ಮುನಿಸ್ವಾಮಿ ಹೇಳಿದರು.

    ನಗರದ ವೀರಭದ್ರನಗರದಲ್ಲಿ ಬಿಜೆಪಿ ಬೂತ್​ ವಿಜಯ್​ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಬೂತ್​ ವಿಜಯ್​ ಅಭಿಯಾನ ಆಯೋಜಿಸಲಾಗಿದೆ ಎಂದರು.

    ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದೆವು. ಆದರೆ, ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅದೇ ಪಕ್ಷದವರು ಅವರಿಗೆ ಮೋಸ ಮಾಡುತ್ತಿರುವ ಬಗ್ಗೆ ಶ್ರೀಘ್ರದಲ್ಲೇ ವಿಚಾರ ಹೊರಬರಲಿದೆ. ಕೋಲಾರ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲು ಅವರ ಸಮುದಾಯದವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದು ಮೇಲೆ ಅವರ ಸಮುದಾಯದವರಿಗೆ ವಿಶ್ವಾಸ ಇಲ್ಲ ಎಂದು ದೂರಿದರು.

    ಕಾಂಗ್ರೆಸ್​ ಮುಖಂಡರಾದ ಮಲ್ಲಿಕಾರ್ಜುನ ರ್ಖಗೆ, ಡಾ.ಜಿ.ಪರಮೇಶ್ವರ, ವರ್ತೂರು ಪ್ರಕಾಶ್​ ಅವರನ್ನು ಚುನಾವಣೆಗಳಲ್ಲಿ ಸಿದ್ದರಾಮಯ್ಯ ಸೋಲಿಸುವ ಮೂಲಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ಸೋನಿಯಾಗಾಂಧಿ, ರಾಹುಲ್​ಗಾಧಿ ಬಂದು ಕೋಲಾರದಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಹೇಳಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಕೆ.ಅಶೋಕ್​, ನಗರಾಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್​, ಪ್ರಧಾನಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ಬೆಳಗಾನಹಳ್ಳಿ ರಮೇಶ್​, ಜಿಲ್ಲಾ ಖಜಾಂಚಿ ಕಾರ್ಪತಿ ಕೆ.ಜಿ.ವೆಂಕಟರವಣ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ, ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts