More

    ಅನಧಿಕೃತ ಮದ್ಯ ಸ್ಪಿರಿಟ್ ಮಾರಾಟ, ಇಬ್ಬರ ಬಂಧನ

    ಹುಬ್ಬಳ್ಳಿ: ನಗರದಲ್ಲಿ ಅನಧಿಕೃತವಾಗಿ ಮದ್ಯ ಹಾಗೂ ಸ್ಪಿರಿಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿಯ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಪರವಾನಗಿ ಇಲ್ಲದೆ ಜನರಿಗೆ ನೀರು ಮಿಶ್ರಿತ ಸ್ಪಿರಿಟ್ ಮಾರಾಟ ಮಾಡುತ್ತಿದ್ದ ಶೇಖರ ಯರಕಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಂದ 4800 ರೂ. ಕಿಮ್ಮತ್ತಿನ 12 ಲೀಟರ್ ಸ್ಪಿರಿಟ್ ಅನ್ನು ಇನ್ಸ್​ಪೆಕ್ಟರ್ ಶ್ಯಾಮರಾಜ ಸಜ್ಜನ ಮತ್ತು ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪರವಾನಗಿ ಇಲ್ಲದೆ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್​ಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ.

    ಸತೀಶ ಶಿವಳ್ಳಿ ಬಂಧಿತ ಆರೋಪಿ. ಆತನಿಂದ 1756 ರೂ. ಕಿಮ್ಮತ್ತಿನ 4.5 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬೆಂಡಿಗೇರಿ ಠಾಣೆ ಪೊಲೀಸರ

    ಕಾರ್ಯವೈಖರಿಯನ್ನು ಆಯುಕ್ತರು ಶ್ಲಾಘಿಸಿದ್ದಾರೆ.

    ಸೂಪರ್ ಮಾರುಕಟ್ಟೆಯಲ್ಲಿ ಸರಣಿ ಕಳ್ಳತನ

    ಧಾರವಾಡ: ನಗರದ ಸೂಪರ್ ಮಾರುಕಟ್ಟೆಯಲ್ಲಿ ಸರಣಿ ಕಳ್ಳತನ ನಡೆದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮಾರುಕಟ್ಟೆಯಲ್ಲಿನ ಸುಮಾರು 4 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು, ಅಂಗಡಿಯಲ್ಲಿನ ಸಾಮಗ್ರಿಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಒಂದು ಅಂಗಡಿ ಮಾಲೀಕರು ಮಾತ್ರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ

    ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts