More

    ಅನಧಿಕೃತ ಬಿತ್ತನೆ ಬೀಜ ಮಾರಾಟ ಮಳಿಗೆಗಳ ಮೇಲೆ ಕೃಷಿ ಜಾಗೃತದಳ ಅಧಿಕಾರಿಗಳ ದಾಳಿ

    ಕೊಪ್ಪಳ: ನಗರದ ಎಸ್‌ಜಿ ಗಂಜ್‌ನಲ್ಲಿ ಅನಧಿಕೃತವಾಗಿ ಬಿತ್ತನೆಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುತ್ತಿದ್ದ ಕಮಿಷನ್ ಏಜೆಂಟ್ಸ್ ಮತ್ತು ಜನರಲ್ ಮರ್ಚೆಂಟ್ಸ್ ಮಳಿಗೆಗಳ ಮೇಲೆ ಕೃಷಿ ಜಾಗೃತದಳದ ಅಧಿಕಾರಿಗಳು ದಾಳಿ ನಡೆಸಿದ್ದು, 95 ಸಾವಿರ ರೂ. ಮೌಲ್ಯದ 1.96 ಕ್ವಿಂಟಾಲ್ ಮೆಕ್ಕೆಜೋಳ ಬಿತ್ತನೆ ಬೀಜ ದಾಸ್ತಾನು ವಶಕ್ಕೆ ಪಡೆದಿದ್ದಾರೆ.

    ಅನಧಿಕೃತ ಮಾರಾಟದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೂರು ತಂಡಗಳು ವಿವಿಧ ಅಂಗಡಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿವೆ. ಈ ವೇಳೆ ಅಕ್ರಮವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಕೆ.ಕುಮಾರಸ್ವಾಮಿ ನೇತೃತ್ವದ ತಂಡ ಶ್ರೀ ವೀರನಾರಾಯಣ ಟ್ರೇಡಿಂಗ್ ಕಂಪನಿಯಲ್ಲಿದ್ದ 95,000 ರೂ. ಮೌಲ್ಯದ 1.96 ಕ್ವಿಂಟಾಲ್ ಮೆಕ್ಕೆಜೋಳ ಬಿತ್ತನೆ ಬೀಜ ವಶಕ್ಕೆ ಪಡೆದಿದೆ.

    ಕೊಪ್ಪಳ ಕೃಷಿ ಸಹಾಯಕ ನಿರ್ದೇಶಕ ಜೀವನ ಸಾಬ್ ನೇತೃತ್ವದ ತಂಡ ಶ್ರೀ ನೀಲಕಂಠೇಶ್ವರ ಟ್ರೇಡಿಂಗ್ ಕಂಪನಿ ಮತ್ತು ಕಂದಗಲ್ ಟ್ರೇಡಿಂಗ್ ಕಂಪನಿಗೆ ಬೀಜ ನಿಯಂತ್ರಣ ಆದೇಶ ಮತ್ತು ಕೀಟನಾಶಕಗಳ ಕಾಯ್ದೆ ಉಲ್ಲಂಘನೆಗಾಗಿ ನೋಟಿಸ್ ಜಾರಿ ಮಾಡಿದ್ದು, ಎರಡು ದಿನದಲ್ಲಿ ಉತ್ತರಿಸಲು ಸೂಚಿಸಿದೆ. ದಾಳಿಯಲ್ಲಿ ಜಾಗೃತ ದಳದ ಸಹಾಯಕ ನಿರ್ದೇಶಕ ನಿಂಗಪ್ಪ, ಕೃಷಿ ಅಧಿಕಾರಿಗಳಾದ ಮುತ್ತಣ್ಣ ಈಳಿಗೇರ, ಸದ್ದಾಂ ಹುಸೇನ್, ಪದ್ಮಾ, ಸ್ಮಿತಾ, ಯೋಗೇಶ ಕಾಟ್ರಳ್ಳಿ, ವಿಶ್ವನಾಥ ಬಗನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts