More

    ಅಧಿಕಾರ ನೀಡಿದರೆ ಪಂಚರತ್ನ ಯೋಜನೆ ಜಾರಿ

    ಮೂಡಿಗೆರೆ: ರಾಜ್ಯದಲ್ಲಿ 120 ಸ್ಥಾನ ಗೆಲ್ಲಿಸಿಕೊಟ್ಟರೆ ಪಂಚರತ್ನ ಯೋಜನೆ ಜಾರಿ ಮಾಡುವ ಮೂಲಕ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಅವರು ಬುಧವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪಂಚರತ್ನ ರಥಯಾತ್ರೆ ಯೋಜನೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್​ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಿಶ್ರ ಸರ್ಕಾರ ನಡೆಸುವ ಆಸೆ ನನಗಿರಲಿಲ್ಲ ಎಂದರು.

    ತನ್ನ ರೈತರು ಸಂಕಷ್ಟಕ್ಕೀಡಾಗಬಾರದು. ಅಧಿಕಾರವಿದ್ದರೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಅವರ ವಿರೋಧದ ನಡುವೆಯೂ 26 ಲಕ್ಷ ರೈತ ಕುಟುಂಬಕ್ಕೆ ಸಾಲ ಮನ್ನಾ ಮಾಡಿದ್ದೇನೆ. ಅಂದು ತಾನು ಮುಳ್ಳಿನ ಹಾಸಿಗೆಯಲ್ಲಿ ಇದ್ದೆ. ಎಲ್ಲವನ್ನೂ ಸಹಿಸಿಕೊಂಡು ರೈತರ ಹಾಗೂ ಈ ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಶ್ರಮಿಸಿದ್ದೇನೆ ಎಂದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೊರ ದೇಶಕ್ಕೆ ಹೋದರೂ ಈ ದೇಶದ ಸಂಸ್ಕೃತಿ ಬಿಡಲಿಲ್ಲ. ಆದರೆ ಬಿಜೆಪಿಯವರ ಸಂಸ್ಕೃತಿ ಏನೆಂದು ಜನರು ಗಮನಿಸುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ನೆಹರು, ಗಾಂಧಿ ಮಾತ್ರವಲ್ಲ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಯಾಕೆ ಬರೆದಿದ್ದಾರೆಂದು ಸಿ.ಟಿ.ರವಿ ತಿಳಿದುಕೊಳ್ಳಬೇಕು ಎಂದರು.

    ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್​ಗೌಡ, ಎಂಎಲ್​ಸಿ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಬಿ.ಎಸ್.ಕನ್ಯಾಕುಮಾರಿ, ಎಂ.ಎಸ್.ಬಾಲಕೃಷ್ಣಗೌಡ, ಎಚ್.ಡಿ.ಜ್ವಾಲನಯ್ಯ, ಡಿ.ಬಿ.ಅಶೋಕ್​ಗೌಡ, ಬಿ.ಎಸ್.ಅಜಿತ್ ಕುಮಾರ್, ಎಂ.ಎ.ಮಹಮ್ಮದ್, ನೂರುಲ್ಲಾ ಅಹಮ್ಮದ್, ಡಿ.ಆರ್.ವಸಂತಕುಮಾರಿ, ಪ್ರೇಮ್ುಮಾರ್, ಜಕರಿಯಾ ಜಾಕೀರ್, ಕೆ.ಪಿ.ಭಾರತಿ, ನಾಸೀರ್ ಮತ್ತಿತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts