More

    ಅಧಿಕಾರಿಗಳ ವರ್ಗಾವಣೆಗೆ ದುಂಬಾಲು

    ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ನೂತನ ಮೇಯರ್ ಆಡಳಿತ ಆರಂಭವಾದ ಎರಡನೇ ದಿನದಲ್ಲಿಯೇ ಮರಾಠಿ, ಹಿಂದಿ ಮಾತನಾಡಲು ಬರುವ ವಾರ್ಡ್‌ಮಟ್ಟದ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ನಗರ ಸೇವಕರು ದುಂಬಾಲು ಬಿದ್ದಿರುವುದು ಜನಪ್ರತಿನಿಧಿಗಳಲ್ಲಿ ಮರಾಠಿ ಪ್ರೇಮ ವ್ಯಕ್ತವಾಗುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಸದಸ್ಯರು ತಮ್ಮ ವಾರ್ಡ್‌ಗೆ ಮರಾಠಿ, ಹಿಂದಿ ತಿಳಿದವರನ್ನೇ ನೇಮಿಸಬೇಕು ಎಂದು ನಗರಾಭಿವೃದ್ಧಿ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ 58 ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಮರಾಠಿ, ಹಿಂದಿ ಮಾತನಾಡಲು, ಸಮಸ್ಯೆಗಳನ್ನು ಮನವರಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

    ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಸಿಗುತ್ತಿಲ್ಲ. ಹಾಗಾಗಿ, ವಾರ್ಡ್‌ಗಳ ಅಭಿವೃದ್ಧಿ, ಸಾರ್ವಜನಿಕರ ಹಿತದೃಷ್ಟಿಯಿಂದ ಅನುಭವಿ, ಮರಾಠಿ ಭಾಷೆ ಮಾತನಾಡಲು ಬರುವ ಅಧಿಕಾರಿಗಳನ್ನೇ ನೇಮಿಸಬೇಕು ಎಂದು ಸದಸ್ಯರು ಪಾಲಿಕೆ ಆಯುಕ್ತರ ಮೇಲೆ ಒತ್ತಡ ಹಾಕಿದ್ದಾರೆ. ಪಾಲಿಕೆ ವ್ಯಾಪ್ತಿಯ 58 ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಫುಡ್ ಇನ್ಸ್‌ಪೆಕ್ಟರ್, ಜೂನಿಯರ್ ಇಂಜಿನಿಯರ್ಸ್‌, ಸರ್ವೇ ಅಧಿಕಾರಿಗಳು ಸೇರಿ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್ಡ್ ಮಟ್ಟದಲ್ಲಿ ಸುಮಾರು 450ಕ್ಕೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬಹುತೇಕ ಅಧಿಕಾರಿಗಳು ಹೊಸದಾಗಿ ನೇಮಕಗೊಂಡಿದ್ದಾರೆ. ಅದರಲ್ಲಿ ಕೆಲ ಅಧಿಕಾರಿಗಳು ಭಾಷಾ ಸಮಸ್ಯೆಯಿಂದಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮರಾಠಿ, ಉರ್ದು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್‌ಗಳಿಗೆ ಕನ್ನಡ ಭಾಷೆ ಜತೆಗೆ ಮರಾಠಿ, ಹಿಂದಿ ಮಾತನಾಡಲು ಬರುವ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ.

    ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿರುವ ಆರೋಗ್ಯ, ತೆರಿಗೆ ಸೇರಿ ವಿವಿಧ ವಿಭಾಗದ ಅಧಿಕಾರಿಗಳ ವರ್ಗಾವಣೆ ಸದಸ್ಯರಿಂದ ಪ್ರಸ್ತಾವನೆ ಜತೆಗೆ ಒತ್ತಡವೂ ಬಂದಿವೆ. ಈಗಾಗಲೇ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಹೊಸ ಕಾಮಗಾರಿಗಳಿಗೆ ಅನುಮೋದನೆಗೆ ಮುನ್ನ ಮೊದಲ ಸಾಮಾನ್ಯ ಸಭೆ ಜರುಗಬೇಕು. ತದನಂತರ ಸ್ಥಾಯಿ ಸಮಿತಿಗಳು ರಚನೆಯಾಗಬೇಕು.
    | ಡಾ.ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts