More

    ಅತ್ಯಾಚಾರ ಆರೋಪಿಗಳಿಗೆ ಗಲ್ಲಿಗೇರಿಸಿ

    ಹುಮನಾಬಾದ್: ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದ ಬಾಲಕಿಯ ಹತ್ಯೆಯನ್ನು ಖಂಡಿಸಿ ಹಾಗೂ ಅವರ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ತಾಲೂಕು ಗಂಗಾಮತ ಕೋಲಿ ಸಮಾಜದಿಂದ ಶಾಂತಿಯುತ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
    ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಕೆಲವು ಕಿಡಿಗೇಡಿಗಳು ಅಪಹರಿಸಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆಗೈದಿರುವುದು ಅಮಾನವೀಯ ಹೇಯ ಕೃತ್ಯ. ಆರೋಪಿಗಳಿಗೆ ಕಠಿಣ ಗಲ್ಲು ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಹತ್ಯೆಗೀಡಾದ ಬಾಲಕಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ಧನ ಒದಗಿಸಬೇಕು. ಬಾಲಕಿ ಸಾವಿಗೆ ಕಾರಣರಾದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಬಾಲಕಿಯ ಕುಟುಂಬದ ಒರ್ವ ಸದಸ್ಯರಿಗೆ ಸರ್ಕಾರಿ ನೀಡಬೇಕು, ಕುಟುಂಬದವರಿಗೆ ಭದ್ರತೆ ನೀಡಬೇಕು ಎಂಬ ಮನವಿಯುಳ್ಳ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
    ಹಳ್ಳಿಖೇಡ(ಕೆ) ವಾಡಿ ಆಶ್ರಮದ ಶ್ರೀ ದತ್ತಾತ್ರೇಯ ಮಹಾರಾಜ, ವಕೀಲ ಲಕ್ಷ್ಮಣ ಔಂಟಿ ಚಿಂಚೋಳ್ಳಿ, ಸಮಾಜದ ಜಿಲ್ಲಾಧ್ಯಕ್ಷ ಜಗನಾಥ ಜಮಾದಾರ, ತಾಲೂಕು ಅಧ್ಯಕ್ಷ ನಾಗಭೂಷಣ ಸಂಗಮ್, ಪ್ರಧಾನ ಕಾರ್ಯದರ್ಶಿ ದಯಾನಂದ ಮೇತ್ರಿ, ಮಹಿಳಾ ಅಧ್ಯಕ್ಷೆ ಶಾರದಾಬಾಯಿ ವಾಂಜರಿ, ಪ್ರಮುಖರಾದ ಪಿ.ಝಡ್. ಗೂರೂಜಿ, ಸಂತೋಷ ಹಳ್ಳಿಖೇಡ, ಅಪ್ಪಾರಾವ ಬ್ಯಾಲಹಳ್ಳಿಕರ್, ವೈಜನಾಥ ಕಣಜಿಕರ್, ಷಣ್ಮುಖಪ್ಪ ಕಾರಪಾಕಪಳ್ಳಿ, ವೀರಣ್ಣ ಉಪ್ಪಾರ, ವಿಜಯಕುಮಾರ ಪಾಟೀಲ್ ವಳಖಿಂಡೇ, ಬಸವರಾಜ ಗಾಂಧಿನಗರ, ವಿಶ್ವನಾಥ ಗೋರಮುಡೆ, ಬಸವರಾಜ ಸದಲಾಪುರೆ, ಸಂತೋಷ ಸಂಗಮ, ಲಖನ್ ಕೋಳಿವಾಡ, ಶ್ರೀಮಂತ ಕಲ್ಲೂರ, ಅಂಕುಶ ಚೀನಕೇರಾ, ಶಿವಕುಮಾರ ಸಂಗಮ, ಪ್ರಕಾಶ ಕನಕಟ್ಟಾ, ಜಗದೀಶ ವಾಂಜರಿ, ಅನೀಲ ವಾಂಜರಿ, ಬಲರಾಮ ಕೋಳಿವಾಡ, ಅರವಿಂದ ಗೌಳಿ, ವಿನೋದ ಜಮಾದಾರ, ಪರಮೇಶ್ವರ ನಾಯಕೋಡೆ, ಉಮೇಶ್ ಕಲ್ಲೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts