More

    ಅತಿ ಸೂಕ್ಷ್ಮಮತಗಟ್ಟೆಗಳಿಗೆ ಎಸಿ ಪರಿಶೀಲನೆ


    ಚಿತ್ರದುರ್ಗ: ಸೂಕ್ಷ್ಮಮತ್ತು ಕಡಿಮೆ ಮತದಾನ ದಾಖಲಾಗಿರುವ ನಗರದ 7 ಮತಗಟ್ಟೆಗಳಿಗೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
    ಈ ವೇಳೆ ಸ್ಥಳೀಯರನ್ನು ಭೇಟಿ ಮಾಡಿದ ಅವರು, ಲೋಕಸಭಾ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ತಪ್ಪದೆ ಎಲ್ಲರೂ ಮತದಾನ ಮಾಡಬೇಕು. ಯಾವುದು ಭಯ, ಆತಂಕಕ್ಕೆ ಒಳಗಾಗದೆ ಮತದಾನ ಮಾಡುವಂತೆ ಸ್ಥಳೀಯರಿಗೆ ಮನವಿ ಮಾಡಿದರು.
    ಬುರುಜನಹಟ್ಟಿ ಹಿರಿಯ ಪ್ರಾಥಮಿಕ ಪಾಠಶಾಲೆ, ಹೊಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ನೆಹರು ನಗರದ ಮಿಲ್ಲತ್ ಸಂಯುಕ್ತ ಪಿ.ಯು. ಕಾಲೇಜು, ರಾಮದಾಸ ಕಾಂಪೌಂಡ್ ಇಲ್‌ಮುಲ್ ಹುದಾ ಇಸ್ಲಾಮಿಯಾ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಜೆ.ಜೆ.ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಸಿ.ಕೆ.ಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ, ಐಯುಡಿಪಿ, ಲೇಔಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಿಗೆ ಒದಗಿಸಿರುವ ಮೂಲ ಕಾರ್ತಿಕ್ ಪರಿಶೀಲಿಸಿದರು.
    ತಹಸೀಲ್ದಾರ್‌ಡಾ.ನಾಗವೇಣಿ, ನಗರಸಭೆ ಆಯುಕ್ತೆ ಎಂ.ರೇಣುಕಾ, ಕಂದಾಯಾಧಿಕಾರಿ ಟಿ.ಜಯಪ್ಪ, ಸಮುದಾಯ ಸಂಘಟನಾ ಅಧಿಕಾರಿ ಪಾಲಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts