More

    ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕಕ್ಕೆ ನಾಳೆ ಚಾಲನೆ

    ಚಿತ್ರದುರ್ಗ: ಆರೋಗ್ಯ ಇಲಾಖೆ ನ.15ರಿಂದ 28ರವರೆಗೆ ಹಮ್ಮಿಕೊಂಡಿರುವ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ‌್ಯಕ್ರಮ, ನವಜಾತ ಶಿಶುವಿನ ಸಪ್ತಾಹಕ್ಕೆ(ನ.15ರಿಂದ 21)15ರ ಬೆಳಗ್ಗೆ 10ಕ್ಕೆ ಬುದ್ಧನಗರದ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣು ಪ್ರಸಾದ್ ತಿಳಿಸಿದ್ದಾರೆ.
    ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕದಲ್ಲಿ 5 ವರ್ಷದೊಳಗಿನ 1,54,500 ಮಕ್ಕಳಿಗಾಗಿ ಆಶಾ ಮತ್ತು ಅಂಗನವಾಡಿ ಕಾರ‌್ಯಕರ್ತೆಯ ರು ಮನೆ, ಮನೆಗೆ ಭೇಟಿ ನೀಡಿ ಒಆರ್‌ಎಸ್ ಪ್ಯಾಕೇಟ್ ವಿತರಿಸಲಿದ್ದಾರೆ.
    ಜಿಲ್ಲಾಸ್ಪತ್ರೆ, 5 ಸಾರ್ವಜನಿಕ ಆಸ್ಪತ್ರೆ, 11 ಸಮುದಾಯ ಆರೋಗ್ಯ ಕೇಂದ್ರಗಳು, 81 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಆ ರೋಗ್ಯ ಕೇಂದ್ರಗಳು ಹಾಗೂ 343 ಉಪಕೇಂದ್ರಗಳಲ್ಲಿ ಒಆರ್‌ಎಸ್ ಮತ್ತು ಜಿಂಕ್ ಮಾತ್ರೆ ಕಾರ್ನರ್ ಸ್ಥಾಪಿಸಲಾಗುವುದು. ಆಶಾ ಕಾರ‌್ಯ ಕರ್ತೆಯರು ಮನೆ, ಮನೆ ಭೇಟಿ ವೇಳೆ ಶಿಶುಗಳಿಗೆ ತಾಯಿಹಾಲು ಉಣಿಸುವ ಕುರಿತಂತೆ ತಿಳಿ ಹೇಳಲಿದ್ದಾರೆ. ಪಾಕ್ಷಿಕ ಸಂದರ್ಭದಲ್ಲಿ ಗ್ರಾ ಮ ಆರೋಗ್ಯ ನೈರ್ಮಲ್ಯ ಸಭೆಗಳನ್ನು ನಡೆಸಲಾಗುವುದು.
    ನವಜಾತ ಶಿಶುವಿನ ವಾರ
    ರಾಷ್ಟ್ರೀಯ ನವಜಾತ ಶಿಶುವಿನ ವಾರ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 12 ವರ್ಷದೊಳ ಗಿನ ಮಕ್ಕಳಿಗೆ ಆ ರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಕುರಿತಂತೆ ಮೌಲ್ಯಮಾಪನ ನಡೆಯಲಿದೆ. ನ.12ರಂದು ಆರಂಭವಾಗಿರುವ ನ್ಯುಮೋನಿಯಾ ವನ್ನು ಯಶಸ್ವಿಯಾಗಿ ಕೊನೆಗಾಣಿಸುವ ಸಾಮಾಜಿಕ ಜಾಗೃತಿ ಕಾರ‌್ಯಕ್ರಮ 2024ರ ಫೆ.29ರವರೆಗೆ ನಡೆಯಲಿದೆ ಎಂದು ಡಿಎಚ್‌ಒ ತಿಳಿಸಿ ದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts