More

    ಅಡಕೆ ಕೊಳೆರೋಗ ತಡೆಗೆ ಮುಂಜಾಗ್ರತೆ

    ಸಿದ್ದಾಪುರ: ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಅಡಕೆ ಕೊಳೆಯಿಂದ ಕಂಗೆಟ್ಟು ಹೋಗಿದ್ದ ಅಡಕೆ ಬೆಳೆಗಾರರು ಈ ಬಾರಿ ಮುಂಜಾಗ್ರತೆ ವಹಿಸತೊಡಗಿದ್ದಾರೆ. ಮಳೆಗಾಲ ಪ್ರಾರಂಭವಾಗುವ ಒಂದು ವಾರದ ಮೊದಲೇ ಅಡಕೆ ಕೊಳೆ ನಿಯಂತ್ರಣ ದ್ರಾವಣದ ಸಿಂಪಡಣೆಗೆ ಮುಂದಾಗಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಬಹುತೇಕ ಅಡಕೆ ಬೆಳೆಗಾರರು ಶೇ. 40ರಷ್ಟು ಇಳುವರಿಗೆ ಮಾತ್ರ ತೃಪ್ತಿಪಡುವಂತಾಗಿತ್ತು. ಏಕೆಂದರೆ, ಶೇ. 60ರಷ್ಟು ಬೆಳೆಯು ಕೊಳೆ ಹಾಗೂ ಗಾಳಿ-ಮಳೆಯಿಂದಾಗಿ ನಾಶವಾಗಿತ್ತು. ಈ ವರ್ಷ ಅಡಕೆ ಬೆಳೆಗಾರರು ಮೇ ತಿಂಗಳ ಎರಡನೇ ವಾರದಿಂದಲೇ ಕೊಳೆ ರೋಗ ನಿಯಂತ್ರಿಸುವ ಬಯೋಫೈಟ್, ಬಯೋಕ್ಲಿಯರ್, ಬಯೋಪಾಸ್, ಮಲ್ಟಿಕ್ಲಿಯರ್, ಮಂಗಳ, ಸುರಕ್ಷಾ ಮೊದಲಾದ ದ್ರಾವಣ ಸಿಂಪಡಿಸುತ್ತಿದ್ದಾರೆ.

    ಅಡಕೆ ಬೆಳೆಯನ್ನೇ ನಂಬಿ ಜೀವನ ನಡೆಸುವುದರಿಂದ ಹಾಗೂ ಅಡಕೆ ಆರ್ಥಿಕ ಬೆಳೆ ಆಗಿರುವುದರಿಂದ ಅದನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಬೆಳೆಗಾರನ ಕರ್ತವ್ಯ. ಆದ್ದರಿಂದ ಮುಂಜಾಗ್ರತೆಯಾಗಿ ಅಡಕೆ ಕೊಳೆ ನಿಯಂತ್ರಣ ದ್ರಾವಣ ಸಿಂಪಡಿಸುವುದು ಅನಿವಾರ್ಯವಾಗಿದೆ. | ಚಂದ್ರಶೇಖರ ಕೊಡಿಯಾ ಹೊನ್ನೆಹದ್ದ ಅಡಕೆ ಬೆಳೆಗಾರ

    ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಉಚಿತ ಲಘು ಪೋಷಕಾಂಶಗಳ ಪ್ಯಾಕೇಟ್ ವಿತರಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಬೆಳೆಗಾರರು ಪಡೆದುಕೊಳ್ಳಬೇಕು. | ಎಚ್.ಜಿ. ಅರುಣ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts