More

    ಅಗ್ಗೇರಿ ಮಾರಿಕಾಂಬಾ ದೇವಿ ಜಾತ್ರೆ ಆರಂಭ

    ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಅಗ್ಗೇರಿ ಮಾರಿಕಾಂಬಾ ದೇವಾಲಯದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ವಿವಿಧ ಧಾರ್ವಿುಕ ಕಾರ್ಯಕ್ರಮದೊಂದಿಗೆ ಮಂಗಳವಾರ ಶೃದ್ಧಾ-ಭಕ್ತಿಯಿಂದ ಆರಂಭಗೊಂಡಿದೆ.

    ಫೆ.25ರಿಂದ ಮಾ.3ರವರೆಗೆ ಧಾರ್ವಿುಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹೀನಗಾರ ಶಾಲೆ ಸಮೀಪದ ಮೈದಾನದಲ್ಲಿ ಜಾತ್ರೆ ನಡೆಯುತ್ತಿದ್ದು ನಿತ್ಯ ದೇವಿಯ ಸನ್ನಿಧಿಯಲ್ಲಿ ಚಂಡಿಹೋಮ, ಗಣಹವನ, ಪಾರಾಯಣ, ಭಕ್ತರಿಂದ ಪೂಜೆ, ವಿವಿಧ ಸೇವೆ, ಹರಕೆ ಸಮರ್ಪಣೆ ನಡೆಯಲಿದೆ.

    ಗೊದ್ಲಬೀಳ ಗ್ರಾಮದ ಅಗ್ಗೇರಿಯಲ್ಲಿ ಬಿಳಗಿ ಅರಸರ ಕಾಲದಿಂದಲೂ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಲಯದ ಇತಿಹಾಸದಿಂದ ತಿಳಿದು ಬರುತ್ತಿದೆ. ಇಲ್ಲಿ ದೇವಿಯ ಪಾದುಕೆ ಇದ್ದು ಪ್ರತಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಶರನ್ನವರಾತ್ರಿ ಸೇರಿ ವಿಶೇಷ ದಿನಗಳಲ್ಲಿ ನಾರಾಯಣ ಪೂಜಾರಿ ಅಗ್ಗೇರಿ ಕುಟುಂಬದವರು ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ.

    ಜಾತ್ರೆ ನೂರಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ 9ವರ್ಷಕ್ಕೊಮ್ಮೆ ನಡೆಯುತ್ತಿದೆ. 2008ರಲ್ಲಿ ಜಾತ್ರೆ ನಡೆದಿತ್ತು. ಆದರೆ, ಈಗ 12ವರ್ಷಕ್ಕೆ ಜಾತ್ರೆ ನಡೆಯುತ್ತಿದೆ. ಗೊದ್ಲಬೀಳ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬದವರು ಈ ದೇವಾಲಯಕ್ಕೆ ಒಳಪಟ್ಟಿದ್ದರೂ ನಾಡಿನ ವಿವಿಧ ಕಡೆಗಳಿಂದ ಆಗಮಿಸುವ ಭಕ್ತರು ಜಾತ್ರೆಗೆ ಸಹಕರಿಸುತ್ತಿದ್ದಾರೆ.

    ವಿಶೇಷ ಎಂದರೆ ಧಾರ್ವಿುಕ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ಹೆಚ್ಚಿನ ಆಧ್ಯತೆ ನೀಡಿ ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ.

    27ರಂದು ಸಾಂಸ್ಕೃತಿಕ ಸಂಗಮ ಉದ್ಘಾಟನೆ: ಫೆ.27ರಂದು ಸಂಜೆ 7ಕ್ಕೆ ಸಾಂಸ್ಕೃತಿಕ ಸಂಗಮ ಉದ್ಘಾಟನೆ. ನಂತರ ಚಿಣ್ಣರ ಚಿಲಿಪಿಲಿ, 28ರಂದು ಸಂಜೆ 7.30ರಿಂದ ಸುಷ್ಮಾ ಹೆಗಡೆ ಇಸಳೂರು ಸಂಗಡಿಗರಿಂದ ಸಂಗೀತ ಸಂಜೆ, ರಾತ್ರಿ 10ರಿಂದ ಶಿರಸಿಯ ಯುವ ಚೇತನ ಯಕ್ಷಕಲಾ ಬಳಗದಿಂದ ಕರ್ಣಪರ್ವ ಯಕ್ಷಗಾನ ತಾಳಮದ್ದಲೆ, 29ರಂದು ಸಂಜೆ 6ರಿಂದ ಭರತ ನಾಟ್ಯ, ಸುನಿತಾ ಶ್ರೀಪಾದರಾವ್ ಸಂಗಡಿಗರಿಂದ ಸಂಗೀತ ಸಂಜೆ, ರಾತ್ರಿ 9ರಿಂದ ನಾದ ಶಂಕರ ಶಿರಸಿ ಇವರಿಂದ ಗಾನ, ಚಿತ್ರ, ವೈಭವ. ಮಾ.1ರಂದು ಸಂಜೆ 7ರಿಂದ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಗೊದ್ಲಬೀಳ ಮಕ್ಕಳ ತಂಡದವರಿಂದ ಸುಧನ್ವಾರ್ಜುನ ಯಕ್ಷಗಾನ, ರಾತ್ರಿ 8.30ರಿಂದ ಭರತ ನಾಟ್ಯ, ರಾತ್ರಿ 9ರಿಂದ ಧರ್ವಂಗದ ದಿಗ್ವಿಜಯ ಯಕ್ಷಗಾನ, 2ರಂದು ಸಂಜೆ 7ರಿಂದ ಕಲಾವೈಭವ, ರಾತ್ರಿ 9ರಿಂದ ದುಶ್ಯಂತ ಶಾಕುಂತಲಾ ಯಕ್ಷಗಾನ, 3ರಂದು ಸಂಜೆ 7ರಿಂದ ಗಾಯನ, ಹಾಸ್ಯ ಸಂಜೆ, ರಾತ್ರಿ 9.30ರಿಂದ ಶಾನಬಾಳೇಗದ್ದೆ ತಂಡದಿಂದ ಬಿಂಗಿ ಪದ ನಂತರ ಆಹ್ವಾನಿತ ತಂಡದವರಿಂದ ಕಡೇವಿನ ಕೋಲಾಟ ಕಾರ್ಯಕ್ರಮ ನಡೆಯಲಿದೆ.

    ಜಾತ್ರೆಯಲ್ಲಿ ಧಾರ್ವಿುಕ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದಂತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಹೆಚ್ಚು ಪೋ›ತ್ಸಾಹ ನೀಡುವ ಉದ್ದೇಶದಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಮುಖ್ಯ. |ನಾಗರಾಜ ಎಸ್.ಭಟ್ಟ ಗೊದ್ಲಬೀಳ ಸಾಂಸ್ಕೃತಿಕ ವಿಭಾಗದ ಸಂಚಾಲಕ

    ಲೋಕಕಲ್ಯಾಣಾರ್ಥವಾಗಿ ಪುರಾತನ ಶಕ್ತಿದೇವತೆಯಾದ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಭಕ್ತಿಯಿಂದ ಆಚರಿಸುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಗ್ರಾಮಸ್ಥರು ಹಾಗೂ ಭಕ್ತರು ಹಲವು ದಿನಗಳಿಂದ ಜಾತ್ರೆಯ ಪೂರ್ವತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಜಾತ್ರೆಯನ್ನು ಯಶಸ್ವಿಯಾಗಿ ಎಲ್ಲರ ಸಹಕಾರದೊಂದಿಗೆ ನಡೆಸುವ ಉದ್ದೇಶ ಹೊಂದಲಾಗಿದೆ. | ಮಂಜುನಾಥ ರಾಮಚಂದ್ರ ಹೆಗಡೆ ಶಿಬಳಿ ಜಾತ್ರಾ ಸಮಿತಿ ಅಧ್ಯಕ್ಷ, | ವಿನಾಯಕ ಎಂ.ಹೆಗಡೆ ಗೊದ್ಲಬೀಳ ಜಾತ್ರಾ ಸಮಿತಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts