More

    ಅದ್ದೂರಿ ಕೆಂಚನಾಲ ಮಾರಿಕಾಂಬ ಜಾತ್ರೆ

    ರಿಪ್ಪನ್‌ಪೇಟೆ: ಕೆಂಚನಾಲ ಮಾರಿಕಾಂಬಾ ದೇವಿಯ ಬೇಸಿಗೆ ಕಾಲದ ಜಾತ್ರೆಯು ಬುಧÀವಾರ ಅದ್ದೂರಿಯಾಗಿ ಜರುಗಿತು. ದೇವಿಯ ಮೂರ್ತಿಯನ್ನು ಮಸರೂರಿನಿಂದ ಸಾಂಪ್ರದಾಯಿಕ ಮಂಗಳವಾದ್ಯಗಳೊAದಿಗೆ ಕೆಂಚನಾಲದ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
    ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಶಕ್ತಿ ದೇವತೆಯಾದ ಮಾರಿಕಾಂಬಾ ದೇವಿ ಅಪಾರ ಭಕ್ತರನ್ನು ಹೊಂದಿದ್ದು ಯಾವ ಜಾತಿ ಬೇಧವಿಲ್ಲದೆ ಮಾರಮ್ಮನ ಮೊರೆ ಹೋಗುವುದು ಇಲ್ಲಿನ ಪದ್ಧತಿ. ಬೆಳೆ ಸಮೃದ್ಧಿ, ಆರ್ಥಿಕ ಪ್ರಗತಿ, ಕುಟುಂಬ ಸೌಖ್ಯ, ಜಾನುವಾರುಗಳ ಕ್ಷೇಮ ಸೇರಿ ಜೀವನ ನಿರ್ವಹಣೆಯ ಸಂಕಷ್ಟಗಳನ್ನು ದೇವಿ ಪರಿಹರಿಸುತ್ತಾಳೆ ಎಂಬ ನಂಬಿಕೆ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ನವ ದಂಪತಿಗಳು ಜಾತ್ರೆಗೆ ಬಂದು ದೇವಿ ದರ್ಶನ ಪಡೆದು ಹರಿಕೆ ಮಾಡುವುದು ಇಲ್ಲಿನ ವಿಶೇಷ.
    ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಸಲಾಗಿತ್ತು. ಮುಜರಾಯಿ ವ್ಯಾಪ್ತಿಗೊಳಪಟ್ಟ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್, ಉಪ ತಹಸೀಲ್ದಾರ್ ಹುಚ್ಚರಾಯಪ್ಪ, ಕಂದಾಯ ಅಽಕಾರಿಗಳು, ಗ್ರಾಪಂ ಅಧ್ಯಕ್ಷ ಉಬೇದುಲ್ಲ ಷರೀ-ï, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts