More

    ಅಗತ್ಯ ವಸ್ತುಗಳ ಪೂರೈಕೆ ಕುರಿತು ಚರ್ಚೆ

    ಯಲ್ಲಾಪುರ: ಲಾಕ್​ಡೌನ್​ನಿಂದಾಗಿ ಅಗತ್ಯ ವಸ್ತುಗಳ ಪೂರೈಕೆಗೆ ಕೈಗೊಳ್ಳಲಾದ ವ್ಯವಸ್ಥೆ ಕುರಿತು ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು.

    ತಹಸೀಲ್ದಾರ್ ಡಿ.ಜಿ. ಹೆಗಡೆ ಹಾಗೂ ಪಿಐ ಸುರೇಶ ಯಳ್ಳೂರು ಅವರೊಂದಿಗೆ ರ್ಚಚಿಸಿದ ಉಪವಿಭಾಗಾಧಿಕಾರಿಗಳು, ಆಹಾರ ಧಾನ್ಯಗಳನ್ನು ನೀಡುವಿಕೆಯಲ್ಲಿ ಟೋಕನ್ ವ್ಯವಸ್ಥೆ ಅಳವಡಿಸಬೇಕು. ರೇಷನ್ ಒಯ್ಯಲು ಅಂಗಡಿಗೊಂದರಂತೆ ಆಟೋ ವ್ಯವಸ್ಥೆ ಮಾಡಬೇಕು. ರೇಷನ್ ನೀಡುವ ಸಮಯದಲ್ಲಿ ಬೀಟ್ ಪೊಲೀಸರನ್ನು ಅಂಗಡಿಯ ಬಳಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಅಗತ್ಯ ವಸ್ತುಗಳ ಪೂರೈಕೆ, ಪಾಸ್​ಗಳ ಬಳಕೆ ಸರಿಯಾಗಿ ಆಗುತ್ತಿರುವ ಕುರಿತು ಮಾಹಿತಿ ಪಡೆದರು. ನಂತರ ಪಟ್ಟಣದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts