More

    ಅಕ್ಷರ ಕ್ರಾಂತಿ ಆರಂಭಿಸಿದ ಧೀರ ಮಹಿಳೆ ಸಾವಿತ್ರಿಬಾಯಿ ಫುಲೆ

    ರೇವತಗಾಂವ: ಅನೇಕ ಸಂಕಟಗಳ ನಡುವೆಯೂ 151 ವರ್ಷಗಳ ಹಿಂದಿನ ಮಹಿಳೆಯರ ಶಿಕ್ಷಣ ಹಾಗೂ ಸಮಾನತೆಗಾಗಿ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಎಂದು ಉಮರಜದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಂ.ಎಚ್.ಅಡಕೆ ಹೇಳಿದರು.

    ಉಮರಜ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಫುಲೆ ಅವರು ಸೀ ಕುಲದ ಆದರ್ಶ ಮಹಿಳೆ, ಶಿಕ್ಷಕಿ ಅಷ್ಟೇ ಅಲ್ಲದೇ ಉತ್ತಮ ಸಂಘಟಕಿ, ಸತ್ಯಶೋಧ ಸಂಘಟನೆಯ ರೂವಾರಿ, ಸಾಹಿತಿ ಕೂಡ ಆಗಿದ್ದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಮನೆಮನೆಗೆ ತೆರಳಿ ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಅಂದಿನ ಸಮಾಜ ಅವರಿಗೆ ಸಾಕಷ್ಟು ಅವಮಾನ ಮಾಡಿದರೂ ಸಮರ್ಥವಾಗಿ ಎದುರಿಸಿದರು. ಹೆಣ್ಣು ಮಕ್ಕಳು ಅವರ ಆದರ್ಶ ಗುಣವನ್ನು ಅಳವಡಿಸಿಕೊಳ್ಳುವುದು ಅವಶ್ಯ ಎಂದು ಹೇಳಿದರು.

    ಸಾವಿತ್ರಿಬಾಯಿ ುಲೆ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರೇವಪ್ಪ ಈರಮಾಣಿ, ಶಿಕ್ಷಕರಾದ ಎಂ.ಬಿ.ದೈವಾಡಿ, ಆರ್.ಟಿ.ಲೋಣಿ, ಜಿ.ಆರ್.ದಬಡೆ, ಬಿ.ಬಿ.ನೆರಲಗಿ, ಪರಶುರಾಮ ಖಾನಾಪುರ, ಚಿದಾನಂದ ಸೋನಾಳ, ಬೈಲಪ್ಪ ಹೆರೂರ, ಶಾರುಖ್ ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts